ಮೈಸೂರು

ಪ್ರೇಮ ವಿವಾಹಕ್ಕೆ ನಿರಾಕರಣೆ: ಯುವತಿ ಆತ್ಮಹತ್ಯೆಗೆ ಯತ್ನ

ಪ್ರೀತಿಸಿದ ಯುವಕನೊಂದಿಗೆ ವಿವಾಹ ಮಾಡಲು ಮನೆಯವರು ಒಪ್ಪದ ಕಾರಣ ಯುವತಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಮೈಸೂರಿನ ಬೆಳವಾಡಿ ಕೈಗಾರಿಕಾ ಪ್ರದೇಶದ ನಿವಾಸಿ ರಂಗಸ್ವಾಮಿಯವರ ಪುತ್ರಿ ಅನಿತಾ(19) ಮನೆಯವರು ಪ್ರೇಮ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನ್ನ ದೊಡ್ಡಮ್ಮನ ಮನೆಗೆ ತೆರಳಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.  ಮನೆಯವರು ಆಕೆಯನ್ನು ಪ್ರಾಣಪಾಯದಿಂದ ಪಾರುಮಾಡಿ ಸ್ಥಳೀಯ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣವನ್ನು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Leave a Reply

comments

Related Articles

error: