
ಮೈಸೂರು
15 ಮಂದಿ ರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಜಿ.ಟಿ.ದೇವೇಗೌಡ
ಮೈಸೂರು,ಫೆ.3:- ಮೈಸೂರು ತಾಲೂಕು ಇಲವಾಲ ಹೋಬಳಿಯ 15 ಮಂದಿ ರೈತರಿಗೆ ಸಾಗುವಳಿ ಚೀಟಿಯನ್ನು ವಿತರಿಸಲಾಯಿತು.
ಮೈಸೂರು ತಾಲೂಕು ಇಲವಾಲದಲ್ಲಿರುವ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಸಾಗುವಳಿ ಚೀಟಿ ವಿತರಣೆ ಮಾಡಿದರು. ಅಕ್ರಮ ಸಕ್ರಮ 94c ಯೋಜನೆಯಡಿಯಲ್ಲಿ ಹೊಸಕೋಟೆ ಗ್ರಾಮದ 34 ಜನರಿಗೆ ಹಕ್ಕುಪತ್ರ ವಿತರಿಸಿದರು. ಬಹುದಿನಗಳ ಬೇಡಿಕೆ ಈಡೇರಿದ್ದಕ್ಕೆ ರೈತರು ಖುಷಿಪಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)