ಮೈಸೂರು

ಮನೆಯೊಂದರ ವರಾಂಡದಲ್ಲಿ ಹಾವು ಪ್ರತ್ಯಕ್ಷ !

ಮೈಸೂರು,ಫೆ.3:- ಮನೆಯೊಂದರ ವರಾಂಡದಲ್ಲಿ  ಹಾವು ಪ್ರತ್ಯಕ್ಷಗೊಂಡು ಮನೆಯವರನ್ನು ಬೆಚ್ಚಬೀಳಿಸಿದ ಘಟನೆ ಮೈಸೂರು ಜಿಲ್ಲೆ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.

ಹಾವೊಂದು ಮನೆಯ ಆವರಣದಲ್ಲಿ ಕಂಡು ಬಂದಿದ್ದು ಗಾಬರಿಗೊಂಡ ಮನೆಯವರು ಮನೆಯ ಬಾಗಿಲು ಹಾಕಿಕೊಂಡು ಕೂಗಾಡುತ್ತಿದ್ದಂತೆ ನೆರೆ ಹೊರೆಯವರು ಓಡಿ ಬಂದಿದ್ದಾರೆ. ವಿಷಯ ತಿಳಿದು ಸ್ನೇಕ್ ಗಣೇಶ್ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಗಣೇಶ್ ಅವರು ಸುರಕ್ಷಿತವಾಗಿ ಹಾವನ್ನು ಹಿಡಿದು ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: