ಪ್ರಮುಖ ಸುದ್ದಿಮೈಸೂರು

ಈ ಬಾರಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತ : ಹೆಚ್.ವಿಶ್ವನಾಥ್

ಮೈಸೂರು,ಫೆ.3:- ಬೆಲೆ ಏರಿದಂತೆ ವೇತನ ಹೆಚ್ಚಾಗುತ್ತೆ ಅಂತಾರೆ. ಅದರಂತೆ ರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ ಮಾಡಿದ್ದಾರೆ. ಹಾಗಿದ್ದರೆ ರೈತರ ಆದಾಯ ಹೆಚ್ಚಳ ಮಾಡುವವರು ಯಾರು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಕೇಂದ್ರವನ್ನು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಆರೋಗ್ಯ ಸಚಿವ ರಮೇಶ್ ಕುಮಾರ್ ಕೂಡ ನರೇಂದ್ರ ಮೋದಿಯಂತೆ ಮಾತಿನ ಮಲ್ಲರು. ಆರೋಗ್ಯದ ಯೋಜನೆಗಳನ್ನು ಅನುಷ್ಠಾನ ಮಾಡಲಿಲ್ಲ. ಈ ಬಾರಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತ. ಸಿಎಂ 4 ಮುಕ್ಕಾಲು ವರ್ಷ ಮೌನವಾಗಿದ್ದಾರೆ. ಈಗ ಮನೆಗೆ ಹೋಗುವಾಗ ಹಲವು ಯೋಜನೆ ಅನುಷ್ಠಾನ ಮಾಡುತ್ತೇನೆ ಅಂತಾರೆ. ನನ್ನ ನಂತರ ಜಲ ಪ್ರಳಯ ಆಗಲಿ ಅಂತ 14 ನೇ ಲೂಯಿ ಹೇಳಿದ್ದ. ಅದರಂತೆ ನನ್ನ ನಂತರ ಆರ್ಥಿಕ ದಿವಾಳಿ ಆಗಲಿ ಅನ್ನೋ ಭಾವನೆ. ಆ ಮನಸ್ಥಿತಿಯಲ್ಲೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ರಾತ್ರಿ 12 ಗಂಟೆಯಲ್ಲಿ ಮುಸ್ಲಿಂ ಧರ್ಮ ಗುರು ಭೇಟಿ ಮಾಡುತ್ತಾರೆ. ಹಗಲು ವೇಳೆ ಭೇಟಿ ಮಾಡಲು ಇವರಿಗೆ ಹೆದರಿಕೆಯೇ,ಅಲ್ಪಸಂಖ್ಯಾತರಿಗೆ ಏನು ಮಾಡಿದ್ದೀರಾ ಎಂದು ಮುಸ್ಲಿಂ ಧರ್ಮ ಗುರುಗಳು ಜಾಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರವಾಗಿ ಆರೋಪಿಸಿದರು.

ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬರೋದಕ್ಕೆ ದಿ.ಶಾಸಕ ಚಿಕ್ಕಮಾದು ಕಾರಣರಾಗಿದ್ದರು. ನಾನು ಕಾಂಗ್ರೆಸ್ ಬಿಟ್ಟು ಪುಸ್ತಕ ಬರೆದುಕೊಂಡು ಇದ್ದೆ.ಆದರೆ ಚಿಕ್ಕಮಾದು ನನ್ನ ಮನವೊಲಿಸಿದರು.ನಿಮ್ಮಂತವರು ರಾಜಕೀಯದಲ್ಲಿ ಇರಬೇಕು ಅಂತ ಕೇಳಿಕೊಂಡಿದ್ದರು .ಅವರೇ ಮೊದಲು ನನ್ನನ್ನು ಜೆಡಿಎಸ್ ಗೆ ಕರೆದರು. ಆದರೆ ಅವರ ಕುಟುಂಬದವರೇ ಜೆಡಿಎಸ್ ತೊರೆದಿದ್ದು ನನಗೆ ನೋವಾಗಿದೆ. ಜೆಡಿಎಸ್ ಅವರಿಗೆ ಎಲ್ಲವನ್ನು ಕೊಟ್ಟಿದೆ. ಆದರೆ ಆ ಚಿಕ್ಕ ಹುಡುಗನನ್ನು ಯಾರೋ ತಲೆ ಕೆಡಿಸಿದ್ದಾರೆ.ನಾನು ಸಾ.ರಾ.ಮಹೇಶ್ ಆತನೊಂದಿಗೆ ಮಾತನಾಡಿದ್ದೆವು. ಆದರೆ ಒಂದೆ ವಾರಕ್ಕೆ ಅವರು ಸಿದ್ದರಾಮಯ್ಯ ಕಾಲಿಗೆ ಬಿದ್ದರೆ ನಾವೇನು ಮಾಡಲಿಕ್ಕಾಗತ್ತೆ. ಜೆಡಿಎಸ್ ವೀಕ್ ಮಾಡಲು ಸಿದ್ದರಾಮಯ್ಯ ಹೀಗೆಲ್ಲ ಮಾಡಿಲ್ಲ. ಯಾಕಂದ್ರೆ ಸಿದ್ದರಾಮಯ್ಯರೇ ಈಗ ವೀಕ್ ಆಗಿದ್ದಾರೆ. ಅವರೇನು ಜೆಡಿಎಸ್ ನ್ನು ವೀಕ್ ಮಾಡೋದು. ಅನಿಲ್ ಚಿಕ್ಕಮಾದು ಜೆಡಿಎಸ್‌ ತೊರೆದಿದ್ದು ನೋವಾಗಿದೆ ಎಂದರು.

ಅನಿಲ್ ಅವರ ತಂದೆ ಚಿಕ್ಕಮಾದು ಗೆ ಜೆಡಿಎಸ್ ಎಲ್ಲಾ ರೀತಿಯ ಸ್ಥಾನಮಾನ ನೀಡಿತ್ತು ಆದರೆ, ಇವರ ಮಗ , ಇವತ್ತು ಕೈ ಸೇರ್ಪಡೆಗೊಂಡಿರುವುದು ನನಗೆ ನಿಜಕ್ಕೂ ತುಂಬಾ ಬೇಸರವಾಗುತ್ತಿದೆ. ಅನಿಲ್ ಚಿಕ್ಕಮಾದು ಕೈ ಸೇರಬಾರದಿತ್ತು, ತಾಳ್ಮೆಯಿಂದ ಇದ್ದರೆ ಅವರಿಗೆ ಜೆಡಿಎಸ್ ಟಿಕೇಟ್ ಸಿಗುತ್ತಿತ್ತು. ದುಡ್ಡಿನ ಆಮಿಷಕ್ಕೆ ಚಿಕ್ಕಮಾದು ಕುಟುಂಬ ಬಲಿಯಾಗಿದೆ. ಇದು ದಿವಂಗತ ಚಿಕ್ಕಮಾದುರ ಸ್ವಾಭಿಮಾನಕ್ಕೆ ಅತಿದೊಡ್ಡ ಧಕ್ಕೆಯಾಗಿದೆ. ಅನಿಲ್ ಚಿಕ್ಕಮಾದು ಈ ರೀತಿ ಮಾಡಬಾರದಿತ್ತು, ಅನಿಲ್ ನ ದಾರಿತಪ್ಪಿಸುವಲ್ಲಿ ಪ್ರಮುಖ ಪಾತ್ರ ಸಂಸದ ಆರ್ ಧ್ರುವನಾರಾಯಣ್ ಅವರದ್ದು. ಜೊತೆಗೆ ಸಿದ್ದರಾಮಯ್ಯ ನವರ ಬೆಂಬಲಿಗರು ಕೂಡ ಶಾಮೀಲಾಗಿದ್ದಾರೆ  ಎಂದು ಅನಿಲ್ ಚಿಕ್ಕಮಾದು ವಿರುದ್ಧ ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನ ಪ್ರಮುಖರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: