ಕರ್ನಾಟಕ

ಗಾಲಿ ಜನಾರ್ದನ ರೆಡ್ಡಿ ಕಚೇರಿಗೆ ಐಟಿ ದಾಳಿ

ಅದ್ಧೂರಿಯಾಗಿ ಮಗಳ ಮದುವೆ ಮಾಡಿ ಟೀಕೆಗೊಳಗಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಆದಾಯ ತೆರಿಗೆ ಇಲಾಖೆ ಸೋಮವಾರ ಚುರುಕು ಮುಟ್ಟಿಸಿದೆ. ರೆಡ್ಡಿ ಅವರ ಕಚೇರಿಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಬಳಿಕ ಜನಾರ್ದನ ರೆಡ್ಡಿ ಮನೆಗೆ ತೆರಳಿ ಮದವೆಗೆ ಮಾಡಿರುವ ಖರ್ಚು ವೆಚ್ಚ, ಉಡುಗೋರೆ, ಮದುವೆಗೆ ಸಹಕಾರ ನೀಡಿದವರ ಹೆಸರು ಸೇರಿದಂತೆ ಇತರ ವಿಷಯಗಳ ಮಾಹಿತಿ ನೀಡಬೇಕೆಂದು ನೋಟಿಸ್ ಜಾರಿ ಮಾಡಿದೆ. ನೋಟಿಸ್‍ನಲ್ಲಿ 16 ಪ್ರಶ್ನೆಗಳನ್ನು ಕೇಳಲಾಗಿದ್ದು, ನ.25ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಆದಾಯ ತೆರಿಗೆ ಇಲಾಖೆ ತನಿಖಾ ವಿಭಾಗದ ಸಹಾಯಕ ನಿರ್ದೇಶಕ ಸಂಜೀವಕುಮಾರ್ ವರ್ಮಾ ನೇತೃತ್ವದ 10 ಅಧಿಕಾರಿಗಳ ತಂಡ ದಾಳಿ ನಡೆಸಿತು. ಮಧ್ಯಾಹ್ನ 12.30ರ ಸುಮಾರಿಗೆ ಹುಬ್ಬಳ್ಳಿ ನೋಂದಣಿ ಇರುವ ವಾಹನಗಳಲ್ಲಿ ಆಗಮಿಸಿದ ತಂಡವು ಜನಾರ್ದನ ರೆಡ್ಡಿ ಒಡೆತನದ ಬಳ್ಳಾರಿ ನಗರದ ವೀರನಗೌಡ ಕಾಲೋನಿಯಲ್ಲಿರುವ ಎಎಂಸಿ ಹಾಗೂ ಒಎಂಸಿ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದವು. ಸೋಮವಾರ ಹೈದರಾಬಾದಿನಲ್ಲಿದ್ದ ರೆಡ್ಡಿ ದಾಳಿ ಹಿನ್ನೆಲೆಯಲ್ಲಿ ಮಧ್ಯಾಹ್ನವೇ ಬಳ್ಳಾರಿಗೆ ಆಗಮಿಸಿದರು. ಪುತ್ರಿ ಬ್ರಹ್ಮಿಣಿಯ ಅರತಕ್ಷತೆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಕುಟುಂಬವರೆಲ್ಲ ಹೈದರಾಬಾದಿಗೆ ತೆರಳಿದ್ದರು.

Leave a Reply

comments

Related Articles

error: