ಕ್ರೀಡೆಪ್ರಮುಖ ಸುದ್ದಿ

ದ್ರಾವಿಡ್ ವಿಶ್ವಕಪ್ ಕಸನು ನನಸು: ಭಾರತ ಅಂಡರ್ 19 ಆಟಗಾರರಿಗೆ 30 ಲಕ್ಷ ರೂ. ಬಹುಮಾನ

ಬೇಓವಲ್,ಫೆ.3- ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ಗೆಲುವಿನ ನಗೆ ಬೀರಿದ್ದರೆ ತಂಡದ ಕೋಚ್ ರಾಹುಲ್ ‍ದ್ರಾವಿಡ್ ಚೊಚ್ಚಲ ವಿಶ್ವಕಪ್ ಕನಸು ನನಸು ಮಾಡಿಕೊಂಡಿದ್ದಾರೆ.

ಹೌದು, ಗೋಡೆ ಖ್ಯಾತಿಯ ಭಾರತದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಆಟಗಾರನಾಗಿ ಸಾಧಿಸಲಾಗದ್ದನ್ನು ಕೋಚ್‌ ಆಗಿ ಸಾಧಿಸುವ ಮೂಲಕ ದ್ರಾವಿಡ್ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ದ್ರಾವಿಡ್ ತಮ್ಮ ವೃತ್ತಿ ಜೀವನದಲ್ಲಿ ಮೂರು ಐಸಿಸಿ ವಿಶ್ವಕಪ್‌ಗಳನ್ನು ಆಡಿದ್ದಾರೆ. 1999, 2003, 2007ರ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರೂ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ಅದರಲ್ಲೂ 2007ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡ ರಾಹುಲ್‌ ದ್ರಾವಿಡ್‌ ನಾಯಕತ್ವದಲ್ಲೇ ಕನಿಷ್ಠ ನಾಕ್‌ಔಟ್‌ ಹಂತಕ್ಕೂ ಪ್ರವೇಶಿಸಲಾಗದೆ ಮುಗ್ಗರಿಸಿತ್ತು. ಹೀಗೆ ದ್ರಾವಿಡ್‌ ಅವರ 16 ವರ್ಷಗಳ ಮಹೋನ್ನತ ವೃತ್ತಿಜೀವನದಲ್ಲಿ ವಿಶ್ವಕಪ್‌ ಗೆಲುವು ಮರೀಚಿಕೆಯಾಗಿಯೇ ಉಳಿದಿತ್ತು. ಇದೀಗ ಕಿರಿಯರ ತಂಡ ವಿಶ್ವಕಪ್ ಗೆಲ್ಲುವ ಮೂಲಕ ಕೋಚ್ ದ್ರಾವಿಡ್‌ಗೆ ವಿಶ್ವಕಪ್ ಅನ್ನು ಗುರುದಕ್ಷಿಣೆಯಾಗಿ ನೀಡಿದ್ದಾರೆ.

ಭಾರತ ಅಂಡರ್ 19 ತಂಡಕ್ಕೆ 30 ಲಕ್ಷ ರೂ. ಬಹುಮಾನ:

ವಿಶ್ವಕಪ್ ಗೆದ್ದು ಗೆಲುವಿನ ನಗೆ ಬೀರಿರುವ ಭಾರತ ಅಂಡರ್ 19 ತಂಡದ ಎಲ್ಲ ಆಟಗಾರರಿಗೂ ತಲಾ 30 ಲಕ್ಷ ರೂ. ಬಹುಮಾನದ ಮೊತ್ತವನ್ನು ಬಿಸಿಸಿಐ ನೀಡುತ್ತಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ಬಿಸಿಸಿಐ, ತಂಡದ ಎಲ್ಲ ಆಟಗಾರರಿಗೂ 30 ಲಕ್ಷ ರೂ., ತಂಡದ ಗೆಲುವಿಗೆ ಕಾರಣಕರ್ತರಾದ ದ್ರಾವಿಡ್ ಅವರಿಗೆ 50 ಲಕ್ಷ ರೂ. ಹಾಗೂ ತಂಡದ ಬೆನ್ನ ಹಿಂದೆ ನಿಂತು ಅವರಿಗೆ ಬೆಂಬಲ ನೀಡಿದ ಅಂಡರ್‌19 ಕ್ರಿಕೆಟ್ ತಂಡದ ತಂತ್ರಜ್ಞಾನ, ಫಿಸಿಯೊ ಇನ್ನೂ ಹಲವು ವಿಭಾಗದ ಬೆಂಬಲ ಸಿಬ್ಬಂದಿಗೆ ತಲಾ 20 ಲಕ್ಷ ರೂ. ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿದೆ. (ವರದಿ-ಎಂ.ಎನ್)

Leave a Reply

comments

Related Articles

error: