ಮೈಸೂರು

ಕುಂಬಳಕಾಯಿ ಒಡೆದು ಮೋದಿಯ ದೃಷ್ಟಿ ತೆಗೆದ ಯುವಭಾರತ್ ಸಂಘಟನೆ ಕಾರ್ಯಕರ್ತರು

ಮೈಸೂರು,ಫೆ.3-ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಫೆ.4 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವುದನ್ನು ಸ್ವಾಗತಿಸಿ ಯುವಭಾರತ್ ಸಂಘಟನೆಯವರು ಶನಿವಾರ ನಗರದ ಅಗ್ರಹಾರದ 101 ಗಣಪತಿ ದೇವಸ್ಥಾನದ ಮುಂಭಾಗ ಕುಂಬಳಕಾಯಿ ಒಡೆದು ಮೋದಿಗೆ ದೃಷ್ಟಿತೆಗೆದರು.

ಮೊದಲಿಗೆ ಕಾಂಗ್ರೆಸ್, ವಾಟಳ್ ನಾಗರಾಜ್ ಹೆಸರಿನಲ್ಲಿ ಕುಂಬಳಕಾಯಿ ಒಡೆದು ಅವರ ಷಡ್ಯಂತ್ರದ ಕೆಟ್ಟ ದೃಷ್ಟಿಯಿಂದ ಬಂದ್ ನೆಪದಲ್ಲಿ ಜನಸಾಮಾನ್ಯರಿಗೆ ಆಗುವ ತೊಂದರೆ ನ್ಯಾಯಾಲಯದ ತೀರ್ಪಿನಿಂದ ನಿವಾರಣೆಯಾಗಿದೆ ಎಂದು ಸ್ವಾಗತಿಸಿ ವಿಘ್ನೇಶ್ವರನಲ್ಲಿ ಪ್ರಾರ್ಥಿಸಿಕೊಂಡು ಮೋದಿಗೆ ಇಳಿ ತೆಗೆದು ಕುಂಬಳಕಾಯಿ ಒಡೆದರು.

ಯುವ ಭಾರತ್ ಸಂಚಾಲಕ ಜೋಗಿ ಮಂಜು ಮಾತನಾಡಿ, ಫೆ.4 ರಂದು ನಡೆಯಲಿರುವ ಪರಿವರ್ತನಾ ಯಾತ್ರೆ ಯಶಸ್ವಿಯಾಗಿ ನಡೆಯಬೇಕು. ಈ ವಿಚಾರದಲ್ಲಿ ಮೋದಿಗೆ ಕೆಟ್ಟ ದೃಷ್ಟಿ ಬೀಳಬಾರದು. ಹೀಗಾಗಿ ಬೂದು ಗುಂಗಳ ಕಾಯಿ ಒಡೆದು ದೃಷ್ಟಿ ತೆಗೆಯಲಾಯಿತು.

 ಈ ಸಂದರ್ಭದಲ್ಲಿ ಯುವ ಮುಖಂಡ ವಿಕ್ರಂ ಅಯ್ಯಂಗಾರ್, ನಿಶಾಂತ್, ಅಜಯ್ ಶಾಸ್ತ್ರಿ, ಜಯಸಿಂಹ, ರಂಗನಾಥ್, ಪರಿಶಿವಮೂರ್ತಿ ಆನಂದ್, ರವಿತೇಜ, ಲಕ್ಷ್ಮಿದೇವಿ, ಸಂದೇಶ್, ಸಂದೀಪ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: