
ಕರ್ನಾಟಕಪ್ರಮುಖ ಸುದ್ದಿ
ಮೋದಿ ಕುರಿತು ರಮ್ಯಾ ಟ್ವಿಟ್: ಜಗ್ಗೇಶ್ ರಿಂದ ತರಾಟೆ
ಬೆಂಗಳೂರು,ಫೆ.5-ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತು ನಟಿ ರಮ್ಯಾ ಮಾಡಿರುವ ಟ್ವಿಟ್ ಇದೀಗ ಭಾರಿ ಸದ್ದು ಮಾಡಿದ್ದು, ರಮ್ಯಾ ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಫೆ.4 ರಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರಂಭ ಸಮಾರಂಭದಲ್ಲಿ ಭಾಗವಹಿಸಿ ಮೋದಿ ಭಾಷಣ ಮಾಡಿದ್ದರು. ಮೋದಿಯವರ ಭಾಷಣ ಕುರಿತು ರಮ್ಯಾ ಪ್ರಧಾನಿ ನರೇಂದ್ರ ಮೋದಿಯವರು ನಶೆಯಲ್ಲಿದ್ದಾಗ ಮಾತನಾಡಿದರೆ ಹೀಗಾಗುತ್ತದೆ ಎಂದು ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದರು.
ರಮ್ಯಾ ಅವರ ಈ ಹೇಳಿಕೆಯನ್ನು ಅನೇಕರು ಖಂಡಿಸಿದ್ದು, ನಟ ಜಗ್ಗೇಶ್ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಟ ಜಗ್ಗೇಶ್, ದೊಡ್ಡವರ ಬಗ್ಗೆ ಮಾತಾಡ ಬೇಕಾದರೆ ಮಾತಾಡುವ ಮಂದಿಗೆ ವಯಸ್ಸು ಅನುಭವ ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಶೆ ಮಾಡಿ ನಿರ್ಣಯಸುತ್ತಾರೆ ಜನ.. ವಿಶ್ವದ ಬಲಿಷ್ಟರಾಷ್ಟ್ರದ ನಾಯಕರೇ ಮೋದಿಯರವರನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು?ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ! ಎಂದು ಟ್ವಿಟ್ ಮಾಡಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್, ರಮ್ಯಾ ಹೆಸರಿನಲ್ಲೇ ರಮ್ ಇದೆ! ಬಹುಶಃ ಅವರೇ ಯಾವಾಗಲೂ ರಮ್ ಕುಡಿದು ಟ್ವೀಟ್ ಮಾಡುತ್ತೆ ಅನ್ನಿಸುತ್ತೆ. ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ ಎಂದು ಟ್ವಿಟ್ ಮಾಡಿದ್ದಾರೆ. (ವರದಿ-ಎಂ.ಎನ್)