
ಮೈಸೂರು
ಗಂಡ-ಹೆಂಡತಿ ನಡುವೆ ಮನಸ್ತಾಪ : ಮಗುವಿನ ಕೊಲೆ ಶಂಕೆ
ಗಂಡ-ಹೆಂಡತಿಯ ನಡುವಿನ ಮನಸ್ತಾಪಕ್ಕೆ ಕರುಳ ಕುಡಿಯೊಂದು ಬಲಿಯಾದ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದಿದೆ.
ಮೈಸೂರಿನ ಹೂಟಗಳ್ಳಿಯ ಕೈಗಾರಿಕಾ ಬಡಾವಣೆಯಲ್ಲಿರುವ ಹೇಮಂತ್ ಎಂಬವರ ಪುತ್ರಿ ರಿತನ್ಯ(5) ತನ್ನ ತಂದೆಯ ಕೈಯ್ಯಿಂದಲೇ ಕೊಲೆಯಾದ ನತದೃಷ್ಟ ಬಾಲಕಿ ಎಂದು ತಿಳಿದು ಬಂದಿದೆ.
ಹೇಮಂತ್ ತನ್ನ ಪತ್ನಿ ಸವಿತಾಳೊಂದಿಗೆ ಮನಸ್ತಾಪ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ಕೊಲೆಗೈದಿರಬೇಕೆಂದು ಶಂಕಿಸಲಾಗಿದೆ. ನನ್ನ ಮತ್ತು ನನ್ನ ಮಗುವಿನ ಸಾವಿಗೆ ಪತ್ನಿಯೇ ಕಾರಣ ಎಂದು ಹೇಮಂತ್ ಡೆತ್ ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಆದರೆ ಹೇಮಂತ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿಜಯನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ.