ಮೈಸೂರು

ಶರಣು ಅಂಬಿಗರ ಚೌಡಯ್ಯ ಜಯಂತಿ ಮಹೋತ್ಸವ : ಅದ್ಧೂರಿ ಮೆರವಣಿಗೆಗೆ ಚಾಲನೆ

ಮೈಸೂರು,ಫೆ.5:- ಮೈಸೂರಿನಲ್ಲಿ ಶರಣು ಅಂಬಿಗರ ಚೌಡಯ್ಯ ಜಯಂತಿ ಮಹೋತ್ಸವಕ್ಕೆ  ಅದ್ಧೂರಿಯಾಗಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸೋಮವಾರ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವದ ಅಂಗವಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಮೇಯರ್ ಬಿ.ಭಾಗ್ಯವತಿ  ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.  ಈ ಸಂದರ್ಭ  ಉಪಮೇಯರ್ ಎಂ.ಇಂದಿರಾ, ನಗರಪಾಲಿಕೆಯ ಸದಸ್ಯರುಗಳು, ಜಿಲ್ಲಾ ಗಂಗಾಮತಸ್ಥ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಾಜು, ಖಜಾಂಚಿ ನಾರಾಯಣ, ಆರ್ ಟಿಓ ಕೃಷ್ಣ, ಗಿರೀಶ್, ಶ್ರೀನಿವಾಸ ಮಿತ್ರ,ಸಾಸಪ್ಪ, ಶಂಕರ್, ಯಜಮಾನ ಶಿವಮಲ್ಲು, ನಾಗೇಂದ್ರಪ್ರಸಾದ್ ಸೇರಿದಂತೆ ಹಲವರು  ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಕಣ್ಮನ ಸೆಳೆದವು. ಮೆರವಣಿಗೆಯಲ್ಲಿ 200 ಕ್ಕೂ ಹೆಚ್ಚು ಮಂದಿ  ಭಾಗವಹಿಸಿದ್ದರು.

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಅರಸು ರಸ್ತೆ ಮೂಲಕ ಕಲಾಮಂದಿರದತ್ತ ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: