
ಮೈಸೂರು
ಅಕ್ರಮ ಒಡಂಬಡಿಕೆ ಆರೋಪ ಹಿನ್ನೆಲೆ: ಪ್ರಾಧ್ಯಾಪಕ ಪ್ರೊ. ಶಿವರಾಜ್ಗೆ ಕಡ್ಡಾಯ ನಿವೃತ್ತಿ
ಮೈಸೂರು ವಿಶ್ವದ್ಯಾನಿಲಯದ ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಜ್ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ. ವಿದೇಶಿ ವಿವಿಯೊಂದಿಗೆ ಅಕ್ರಮವಾಗಿ ಒಡಂಬಡಿಕೆ ಮಾಡಿಕೊಂಡ ಆರೋಪ ಅವರ ಮೇಲಿದೆ. ಪ್ರೊ. ಶಿವರಾಜ್ ಅವರ ನಿವೃತ್ತಿಗೆ ಎರಡು ವರ್ಷ ಮಾತ್ರ ಬಾಕಿ ಇತ್ತು.
ಸೋಮವಾರದಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆಯಲ್ಲಿ ಕ್ರಾಫರ್ಡ್ ಹಾಲ್ನಲ್ಲಿ ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರೊ. ರಂಗಪ್ಪ ಅವರ ಪುತ್ರನಿಗೆ ಎಂಎಸ್ಸಿ ಅಣುಜೀವಶಾಸ್ತ್ರ ವಿಭಾಗಕ್ಕೆ ಕಾನೂನುಬಾಹಿರವಾಗಿ ಪ್ರವೇಶ ನೀಡಲು ನಿರಾಕರಿಸಿದ್ದೆ. ಈ ಕಾರಣಕ್ಕೆ ನನ್ನ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರೊ. ಶಿವರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.