ದೇಶಮನರಂಜನೆ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ : ಗಮನ ಸೆಳೆದ ಕನ್ನಡ ಚಲನಚಿತ್ರ ಮಳಿಗೆ

venk-2ಗೋವಾದಲ್ಲಿ ಸೋಮವಾರದಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ ದೊರಕಿದೆ. ಈ ಬಾರಿ ಚಲನಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರ ಮಳಿಗೆಯನ್ನು ತೆರೆಯಲಾಗಿದ್ದು ಗಮನ ಸೆಳೆಯುತ್ತಿದೆ.

ಪನೋರಮಾ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷ  ರಾಜೇಂದ್ರ ಸಿಂಗ್ ಬಾಬು ಹಾಗೂ ಸದಸ್ಯ ಡಾ.ಕೆ.ಪುಟ್ಟಸ್ವಾಮಿ ಅವರನ್ನು ಕೆಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿನಂದಿಸಿದರು.

ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಎನ್.ಎಫ್.ಡಿ.ಸಿ ತೆರೆದಿರುವ ಫಿಲ್ಮ್ ಬಜಾರಿನಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಚಲನಚಿತ್ರ ಅಕಾಡೆಮಿ ಮಳಿಗೆ ತೆರೆದಿದೆ. ಪ್ರಥಮಬಾರಿಗೆ ತೆರೆಯಲಾಗಿರುವ ಈ ಮಳಿಗೆಯಲ್ಲಿ ಕನ್ನಡ ಚಲನಚಿತ್ರಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಕನ್ನಡ ಚಲನಚಿತ್ರ ರಂಗವನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಅಕಾಡೆಮಿ ಕಾರ್ಯಕ್ರಮಗಳ ಕಿರುಹೊತ್ತಗೆಯನ್ನು ವಿತರಿಸಲಾಗುತ್ತಿದೆ. ಕೆಂದ್ರ ಸಚಿವ ವೆಂಕಯ್ಯ ನಾಯ್ಡು ಮಳಿಗೆಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು. ನಿರ್ದೇಶಕ ಪವನಕುಮಾರ ತಮ್ಮ ಯು ಟರ್ನ್ ಮಾರಾಟಕ್ಕೆ ಮಳಿಗೆ ಬಳಸಿಕೊಳ್ಳುತ್ತಿದ್ದಾರೆ. ತಿಥಿ ಚಲನಚಿತ್ರ ನಿರ್ದೇಶಕ ರಾಮರೆಡ್ಡಿ ಮಳಿಗೆಗೆ ನೀಡಿದರು.

Leave a Reply

comments

Related Articles

error: