ದೇಶ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಕೊಂದ ಅಪ್ರಾಪ್ತ

ಹೈದರಾಬಾದ್,ಫೆ.05:  ಆಟವಾಡುತ್ತಿದ್ದ ಬಾಲಕಿಯ ಮೇಲೆ ಅಪ್ರಾಪ್ರ ಹುಡುಗ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ತೆಲಂಗಾಣದ ಕೀಲಾಥಟ್ಟಾಪಾರೈ ಗ್ರಾಮದಲ್ಲಿ ನಡೆದಿದೆ.

ನಿಶಾ(5) ಮೃತ ದುರ್ದೈವಿ.  ನಿಶಾ ಇತ್ತೀಚೆಗೆ 1ನೇ ತರಗತಿಗೆ ಶಾಲೆಗೆ ಸೇರಿದ್ದಳು. ಈಕೆಯ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು. ನಿಶಾ. ಪ್ರತಿ ದಿನ 2 ಗಂಟೆಗೆ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಳು. ಆಕೆಯ ಸಹೋದರ 5 ಗಂಟೆಗೆ ಶಾಲೆ ಮುಗಿಸಿ ಮನೆಗೆ ಬರುವವರೆಗೂ ಒಬ್ಬಳೇ ಇರುತ್ತಿದ್ದಳು.

ಶಾಲೆಯಿಂದ ಬಂದು ನಿಶಾ ನೆರೆಹೊರೆಯ ಸ್ನೇಹಿತರ ಜೊತೆ ಆಡುತ್ತಿದ್ದಳು. ಈ ವೇಳೆ ಪಕ್ಕದ ಮನೆಯ ದೀಪಕ್(14) ಬಂದು ನಿಶಾಳನ್ನು ಆಕೆಯ ಮನೆಯೊಳಗೆ ಕರೆದೊಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ 7 ವರ್ಷದ ಪ್ರಶಾಂತ್‍ನನ್ನು ಕೂಡ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ.

ಮನೆಯೊಳಗೆ ಹೋದ ಮೇಲೆ ದೀಪಕ್ ನಿಶಾಳಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇದನ್ನು ನೋಡಿದ ಪ್ರಶಾಂತ್ ಭಯಪಟ್ಟು ಓಡಿ ಹೋಗಿ ಈ ಬಗ್ಗೆ ನಿಶಾಳ ಸಹೋದರನಿಗೆ ತಿಳಿಸಿದ್ದಾನೆ. ಇದನ್ನು ಗಮನಿಸಿದ ದೀಪಕ್ ನಿಶಾಳಿಗೆ ಬೆಂಕಿ ಹಚ್ಚಿ, ಬಳಿಕ ಮನೆಗೆ ಬೆಂಕಿ ಬಿದ್ದಿದೆ ಎಂದು ಕೂಗಿಕೊಂಡಿದ್ದಾನೆ. ನೆರೆಹೊರೆಯವರು ಬಂದು ನೋಡುವಷ್ಟರಲ್ಲಿ ನಿಶಾ ಸುಟ್ಟು ಭಸ್ಮವಾಗಿದ್ದಳು. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲು ಆರಂಭಿಸಿದ್ದಾರೆ. ದೀಪಕ್ ನಿಶಾಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಸಾಕ್ಷ್ಯಾಧಾರದ ಮೇಲೆ ದೀಪಕ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಂಡಿದ್ದು, ರಿಮ್ಯಾಂಡ್ ಹೋಮ್ ಗೆ ಒಪ್ಪಿಸಿದ್ದಾರೆ. . (ವರದಿ: ಪಿ. ಎಸ್ )

Leave a Reply

comments

Related Articles

error: