ಮೈಸೂರು

ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಬೆದರಿಕೆ : ಮನನೊಂದ ಫೈನಾನ್ಶಿಯರ್ ನೇಣಿಗೆ ಶರಣು

ಮೈಸೂರು,ಫೆ.5:- ಸಾಲ ವಾಪಸ್ ಕೇಳಿದ್ದಕ್ಕೆ ರಾಜಕಾರಣಿಯಿಂದ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ  ಮನನೊಂದ ಫೈನಾನ್ಶಿಯರ್ ಓರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ.

ಆನಂದೂರು ನಿವಾಸಿ ಎ.ಸಿ.ಯತಿರಾಜ್ ಎಂದು ಗುರುತಿಸಲಾಗಿದೆ. ಈತ ವಿಜಯನಗರದಲ್ಲಿ ಚೆಲುವನಾರಾಯಣಸ್ವಾಮಿ ಚಿಟ್ ಫಂಡ್ ನಡೆಸುತ್ತಿದ್ದ. ರಾಜಕಾರಣಿಗಳಿಗೆ 5 ಕೋಟಿಯಷ್ಟು ಹಣ ನೀಡಿದ್ದ. ಎಪಿಎಂಸಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಸೇರಿದಂತೆ ಹಲವು ರಾಜಕಾರಣಿಗಳಿಗೆ ಸಾಲ ನೀಡಿದ್ದ. ಮಾವಿನಹಳ್ಳಿ ಸಿದ್ದೇಗೌಡನಿಗೆ ಸುಮಾರು 1,ಕೋಟಿ 70 ಲಕ್ಷ ಸಾಲ ನೀಡಿದ್ದ. ಸಾಲ ಕೇಳಿದ್ದಕ್ಕೆ ಮಾವಿನಹಳ್ಳಿ ಸಿದ್ದೇಗೌಡ ಕೊಲೆ ಬೆದರಿಕೆಯೊಡ್ಡಿದ್ದ ಎಂಬ  ಆರೋಪ ಕೇಳಿ ಬಂದಿದೆ. ಸಾಲ ವಾಪಸ್ ಕೇಳಿದರೆ ಕೊಲೆ ಮಾಡಿಸ್ತೀನಿ  ಎಂದು ಮಾವಿನಹಳ್ಳಿ ಸಿದ್ದೇಗೌಡ ಹೇಳಿದ್ದ ಎನ್ನಲಾಗಿದೆ. ಮೆಲ್ಲಳ್ಳಿ ಸಿದ್ದೇಗೌಡನಿಗೆ 77 ಲಕ್ಷ,  ಏಡಳ್ಳಿ ಮಾದಪ್ಪನಿಗೆ 1 ಕೋಟಿ 60. ಲಕ್ಷ, ಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಗೆ 33 ಲಕ್ಷ ಸೇರಿ ಹಲವರಿಗೆ ಸಾಲ ನೀಡಿದ್ದ. ಸಾಲ ವಾಪಸ್ಸು ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೊಲೆ ಬೆದರಿಕೆಯೊಡ್ಡಿದ್ದರು. ಇದರಿಂದ ಯತಿರಾಜ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: