
ಮೈಸೂರು
ರಂಗ ಮತ್ತು ಜನಪದ ನೃತ್ಯ ತರಬೇತಿ ಶಿಬಿರ ಫೆ.15-ಮಾ.1ರವರೆಗೆ
ಮೈಸೂರು,ಫೆ.5 : ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಂಗ ಮತ್ತು ಜಾನಪದ ನೃತ್ಯಗಳ ತರಬೇತಿ ಶಿಬಿರವನ್ನು ಫೆ.15 ರಿಂದ ಮಾ.1ರವರೆಗೆ ಕಲಾಮಂದಿರದ ಆವರಣದಲ್ಲಿ ಆಯೋಜಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶಿಬಿರವು ಪ್ರತಿದಿನ ಸಂಜೆ 4.30ರಿಂದ 6ರ ವರೆಗೆ ಕಲಾಮಂದಿರದ ಆವರಣದಲ್ಲಿ ನಡೆಯಲಿದ್ದು, ಕರ್ನಾಟಕ ಮೂಲ ಜನಪದ ನೃತ್ಯಗಳಾದ ಕಂಸಾಳೆ, ಡೊಳ್ಳುಕುಣಿತ, ಪೂಜಾ ಕುಣಿತ, ಮಾರಿ ಕುಣಿತ, ಕೋಲಾಟ ಮೊದಲಾದವನ್ನು ತರಬೇತಿ ನೀಡಲಾಗುವುದು. ಇದರೊಂದಿಗೆ ಜಾನಪದ ತಜ್ಞರಿಂದ ರಂಗಭೂಮಿ, ಜನಪದರ ಕಲೆ, ಸಂಸ್ಕೃತಿ, ಸಾಹಿತ್ಯದ ಪರಿಚಯವನ್ನು ಮಾಡಿಸಲಾಗುವುದು.ಮಾಹಿತಿಗಾಗಿ ಮೊ.ಸಂ 9844427129, 7019441509 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)