ಕ್ರೀಡೆಮೈಸೂರು

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಮೈಸೂರು ತಂಡದ ಸಾಧನೆ

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬಾಲಕರ ವಿಭಾದಲ್ಲಿ ತಂಡ ಪ್ರಶಸ್ತಿಯನ್ನು ಮೈಸೂರು ಜಿಲ್ಲೆ ಗಳಿಸಿದೆ.

ಇತ್ತೀಚೆಗೆ ಯಾದಗಿರಿಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಬಾಲಕರ ವಿಭಾಗದಲ್ಲಿ ಶಶಾಂಕ್  ಎಸ್.ಪ್ರಥಮ, ಯೋಗೇಶ್ ಎಚ್.ಕೆ. ಪ್ರಥಮ, ದರ್ಶನ್ ಬಾಲು ಪ್ರಥಮ, ಸಮಿತ್ ಕುಮಾರ್ ಸಹಾನಿ ಪ್ರಥಮ, ಮಹಾವೀರ ಜೈನ್. ಎಚ್.ಎನ್,ತೃತೀಯ, ಮನೋಜ್ ಎಸ್.ವಿ. ತೃತೀಯ ಸ್ಥಾನಗಳಿಸಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಅಶ್ವಿನಿ ಎಸ್. ಪ್ರಥಮ, ಕಾವ್ಯ ಕೆ, ಪ್ರಥಮ, ವಿಜಯಲಕ್ಷ್ಮಿ ಜೆ. ದ್ವಿತೀಯ, ಕವನಾ ಮಹೇಶ್ ಹೆಗ್ಡೆ ದ್ವಿತೀಯ, ಜಸ್ನಾ ಜೋಸೆಫ್  ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಮೈಸೂರು ಜಿಲ್ಲೆಯಿಂದ ಬಾಲಕರ ವಿಭಾಗದಲ್ಲಿ ವಿವೇಕ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಶಶಾಂಕ್ ಎಸ್, ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಯೋಗೇಶ್ ಎಚ್.ಕೆ, ಕಾವೇರಿ ಪದವಿಪೂರ್ವ ಕಾಲೇಜಿನ ದರ್ಶನ್ ಬಾಲು, ಸದ್ವಿದ್ಯಾ ಸೆಮಿರೆಸಿಡೆನ್ಸಿಯಲ್ ಪದವಿಪೂರ್ವ ಕಾಲೇಜಿನ ಸಮಿತ್ ಕುಮಾರ್ ಸಹಾನಿ, ಬಾಲಕಿಯರ ವಿಭಾಗದಲ್ಲಿ ವಿಜಯ ವಿಠಲ ಪದವಿಪೂರ್ವ ಕಾಲೇಜಿನ ಅಶ್ವಿನಿ ಎಸ್, ಎಂ.ಎಂ.ಕೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಕಾವ್ಯ ಕೆ. ಆಯ್ಕೆಯಾಗಿದ್ದಾರೆ.

Leave a Reply

comments

Related Articles

error: