ಮೈಸೂರು

ಬಾಳೆಹಣ್ಣು ಮಂಡಿಯಲ್ಲಿ ವ್ಯಕ್ತಿಯ ಪಕ್ಕದಲ್ಲೇ ಮಲಗಿತ್ತು ಚಿರತೆ!

ಮೈಸೂರು,ಫೆ.6:- ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ಉತ್ತನಹಳ್ಳಿ ರಸ್ತೆಯ ರಾಜಣ್ಣ ಬಾಳೆಹಣ್ಣು ಮಂಡಿಯಲ್ಲಿ ಸೆರೆಯಾದ ಘಟನೆ ನಡೆದಿದೆ.

ಉತ್ತನಹಳ್ಳಿ ರಸ್ತೆಯ ರಾಜಣ್ಣ ಬಾಳೆಹಣ್ಣು ಮಂಡಿಯನ್ನು ಪ್ರವೇಶ ಮಾಡಿ,ಅಲ್ಲಿದ್ದ  ನಾಯಿ ತಿಂದು ನಿನ್ನೆ ಇಡೀ ರಾತ್ರಿ ಮಂಡಿಯಲ್ಲೇ ಕಾಲ ಕಳೆದಿತ್ತು. ಬಾಳೆ ಮಂಡಿಯಲ್ಲಿ ಮಲಗಿದ್ದ ರಾಮಕೃಷ್ಣಪ್ಪ ಪಕ್ಕದಲ್ಲೇ ಚಿರತೆಯೂ ಮಲಗಿತ್ತು ಎನ್ನಲಾಗಿದೆ. ರಾಮಕೃಷ್ಣಪ್ಪ  ನಾಯಿ ಎಂದು  ತಿಳಿದು ಚಿರತೆಯ ಬೆನ್ನು ಸವರಿದ್ದರು. ಆದರೆ ಚಿರತೆ ಎಂದು ಗೊತ್ತಾದ ಬಳಿಕ ಭಯ ಆವರಿಸಿತ್ತು. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಫೋನಾಯಿಸಿದ್ದರು.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಯಶಸ್ವಿಯಾಗಿ ಚಿರತೆಯನ್ನು ಸೆರೆಹಿಡಿದಿದ್ದು, ಸೆರೆಹಿಡಿದ ಚಿರತೆಯನ್ನು ಮೈಸೂರು ಮೃಗಾಲಯಕ್ಕೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: