ಕರ್ನಾಟಕಪ್ರಮುಖ ಸುದ್ದಿ

ಫೆ.11 ರಂದು ಬೆಂಗಳೂರಿನಲ್ಲಿ `ಲೆಸ್ ಟ್ರಾಫಿಕ್ ಡೇ’: ನಟ ಯಶ್ ರಾಯಭಾರಿ

ಬೆಂಗಳೂರು,ಫೆ.6-ಪರಿಸರ ಮಾಲಿನ್ಯದ ಪ್ರಮಾಣ ತಗ್ಗಿಸಲು, ಖಾಸಗಿ ವಾಹನಗಳನ್ನು ಅತ್ಯಂತ ಕಡಿಮೆ ಬಳಕೆ ಮಾಡುವುದು, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಫೆ.11 ರಂದು ಬೆಂಗಳೂರಿನಲ್ಲಿ ಮೊದಲ ಆವೃತ್ತಿಯ ಲೆಸ್ ಟ್ರಾಫಿಕ್ ಡೇ ನಡೆಯಲಿದೆ.

ರಾಜ್ಯ ಸಾರಿಗೆ ಇಲಾಖೆ ಮತ್ತು ಇತರೆ ಸೇವಾ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ರಾಯಭಾರಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ನಗರದ ಅನೇಕ ಭಾಗಗಳಲ್ಲಿ ಲೆಸ್ ಟ್ರಾಫಿಕ್ ಡೇ ಭಾಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬೆಂಗಳೂರಿನ ನಿವಾಸಿಗಳು ಖಾಸಗಿ ವಾಹನಗಳನ್ನು ಆಶ್ರಯಿಸದೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ. ಸಾರಿಗೆ ಇಲಾಖೆಯು 2017ರ ಡಿಸೆಂಬರ್ ನಲ್ಲೇ ಈ ಕಾರ್ಯಕ್ರಮವನ್ನು ಘೋಷಿಸಿದ್ದು, ಪ್ರತಿ ತಿಂಗಳ ಎರಡನೇ ಭಾನುವಾರ ಲೆಸ್ ಟ್ರಾಫಿಕ್ ಡೇ ಆಚರಿಸಲಾಗುತ್ತದೆ. ಮೊದಲಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಜಾರಿಗೆಯಾಗಲಿದ್ದು, ನಂತರ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: