
ಮೈಸೂರು
ಮಾಜಿ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಿ
ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮಾಜಿ ಸಚಿವ ಎಸ್.ಎ.ರಾಮದಾಸ್ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.
ಮಾಜಿ ಸಚಿವ ಎಸ್.ಎ.ರಾಮದಾಸ್ ನವೆಂಬರ್ 9ರಂದು ಟಿವಿ ಮಾಧ್ಯಮವೊಂದಕ್ಕೆ ಕೇಂದ್ರ ಸರ್ಕಾರವು 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಹಾಗೂ ಹೊಸದಾಗಿ ಹೊರತಂದಿರುವ 2000ರೂ.ಮುಖಬೆಲೆಯ ನೋಟುಗಳ ಕುರಿತು ಹೇಳಿಕೆ ನೀಡುವ ಸಂಬಂಧವಾಗಿ ಮೈಸೂರಿನ ನೋಟು ಮುದ್ರಣ ಘಟಕದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನೋಟು ಮುದ್ರಗೊಳ್ಳುತ್ತಿದೆ. ಈ ಕುರಿತು ತಮಗೆ ಮಾಹಿತಿ ಇತ್ತು ಎಂಬ ಹೇಳಿಕೆ ನೀಡಿದ್ದಾರೆ. ದೇಶದ ಕಾರ್ಯ ನೀತಿಗಳನ್ನು ಹೀಗೆ ಬಹಿರಂಗ ಪಡಿಸುವುದು ದೇಶ ವಿರೋಧಿ ಕೃತ್ಯವಾಗಿರುತ್ತದೆ. ಅದರಿಂದ ರಾಮದಾಸ್ ಅವರಿಗೆ ಮಾಹಿತಿ ನೀಡಿದ ಅಧಿಕಾರಿ ಹಾಗೂ ರಾಮದಾಸ್ ವಿರುದ್ಧ ಮೊಕದ್ದಮೆ ದಾಖಲಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಕಾರ್ಯದರ್ಶಿ ನಾಗೇಶ ಕರಿಯಪ್ಪ ಒತ್ತಾಯಿಸಿದ್ದಾರೆ.