ಕರ್ನಾಟಕ

ಎಟಿಎಂ ಹಣ ದೋಚಿಕೊಂಡು ಪರಾರಿಯಾಗಿದ್ದ ನಾಲ್ವರ ಬಂಧನ

ರಾಜ್ಯ(ಬೆಂಗಳೂರು)ಫೆ.6:- ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ 90 ಲಕ್ಷ ಎಟಿಎಂ ಹಣ ದೋಚಿಕೊಂಡು ಪರಾರಿಯಾಗಿದ್ದ ಬಳ್ಳಾರಿಯಲ್ಲಿ ಅಡಗಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನಾರಾಯಣಸ್ವಾಮಿ (45),  ನರಸಿಂಹರಾಜು (28), ಸಹಚರರಾದ ರಿಯಾಜ್ (30) ಹಾಗೂ ಜಗದೀಶ್ (28) ಎಂದು ಗುರುತಿಸಲಾಗಿದೆ.  ಬಂಧಿತರಿಂದ  80 ಲಕ್ಷ ಹಣ ವಶ ಪಡಿಸಿಕೊಂಡಿದ್ದಾರೆ. ಕಳೆದ ಜನವರಿ 29ರಂದು 90 ಲಕ್ಷರೂ. ಇದ್ದ ಟಾಟಾ ಸುಮೋ ಸಮೇತ ಪರಾರಿಯಾಗಿದ್ದರು. ವಾಹನ ಸಿಎಂಎಸ್ ಏಜೆನ್ಸಿಗೆ ಸೇರಿದ್ದಾಗಿತ್ತು. ಸಿಎಂಎಸ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಆರೋಪಿಗಳು ಕೆಲಸ ಮಾಡುತ್ತಿದ್ದರು. ಗನ್ ಮ್ಯಾನ್ ಗೆ ಬಾಳೆ ಹಣ್ಣು ತರಲು ಹೇಳಿ ಎಸ್ಕೇಪ್ ಆಗಿದ್ದರು. ಬಳಿಕ ಮಾದನಾಯಕನಹಳ್ಳಿ ಸಮೀಪದ ಕಿತ್ತನಹಳ್ಳಿ ಬಳಿ ಟಾಟಾ ಸುಮೋ ಬಿಟ್ಟು ಪರಾರಿಯಾಗಿದ್ದರು. ಬಳ್ಳಾರಿಗೆ ಹಣದ ಸಮೇತ ಪರಾರಿಯಾಗಿದ್ದರು. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. 15 ದಿನಗಳಿಂದ ಎಟಿಎಂ ಹಣ ದೋಚಲು ಆರೋಪಿಗಳು ಪ್ಲಾನ್ ಮಾಡಿದ್ದರು. ನಾರಾಯಣಸ್ವಾಮಿ ಸ್ನೇಹಿತರ ಬಳಿ  15 ಲಕ್ಷ ಸಾಲ ಮಾಡಿದ್ದ. ಹೀಗಾಗಿ ಸಾಲ ತೀರಿಸಲು ಹಣ ದೋಚಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: