ಮೈಸೂರು

ಎರಡು ಪ್ರತ್ಯೇಕ ಪ್ರಕರಣ : ಸಾಲಬಾಧೆ ತಾಳಲಾರದೇ ಇಬ್ಬರು ರೈತರು ಆತ್ಮಹತ್ಯೆ

ಮೈಸೂರು,ಫೆ.6:-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ರೈತರು ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮರಡೀಪುರ ಗ್ರಾಮದ ಶಂಕರ್ (48) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಕಬ್ಬು ಸೇರಿ ಹಲವು ಬೆಳೆ ಬೆಳೆದಿದ್ದರು. ಬ್ಯಾಂಕ್ ಸೇರಿ ಹಲವೆಡೆ 4 ಲಕ್ಷ ಸಾಲಮಾಡಿಕೊಂಡಿದ್ದರು. ಸಾಲತೀರಿಸಲಾಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕೆ.ಆರ್.ನಗರದಲ್ಲಿ ರೈತರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಡಪ್ಪನಹಳ್ಳಿಯ ರಾಜಯ್ಯ(55) ಎಂಬವರೇ ಮೃತ ದುರ್ದೈವಿ. ಇವರು 2 ಎಕರೆ ಜಮೀನಿನಲ್ಲಿ ತಂಬಾಕು, ರಾಗಿ ಬೆಳೆದಿದ್ದರು. ಹನಸೋಗೆ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 3 ಲಕ್ಷ ಸಾಲ ಮಾಡಿಕೊಂಡಿದ್ದರು. ಎಣಿಸಿದಂತೆ ಫಸಲು ಬಂದಿರಲಿಲ್ಲ. ಬ್ಯಾಂಕ್ ನೋಟಿಸ್ ಬಂದಿದ್ದರಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆ. ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: