
ಮೈಸೂರು
ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡುವ ವಿಚಾರ: ಸಂಧಾನ ಸಭೆ ವಿಫಲ
ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಬೆಳಗಾವಿಯಲ್ಲಿ ನಡೆದ ಸಚಿವರು ಹಾಗೂ ರೈತ ಮುಖಂಡರ ಸಭೆ ವಿಫಲವಾಗಿದೆ.
ಮಂಗಳವಾರದಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಹಾಗೂ ರಾಜ್ಯದ ವಿವಿಧ ರೈತ ಮುಖಂಡರ ನಡುವೆ ಸಂಧಾನ ಸಭೆ ನಡೆಯಿತು. ಕಬ್ಬು ಬೆಳೆಗೆ ಬೆಂಬಲ ನೀಡುವಂತೆ ರೈತ ಮುಖಂಡರು ಬೇಡಿಕೆ ಮುಂದಿಟ್ಟಿದ್ದು, ಈ ಬೇಡಿಕೆಗಳ ಈಡೇರಿಕೆಗೆ ಸರಕಾರ ಹಿಂದೇಟು ಹಾಕಿದ ಪರಿಣಾಮ ಸಭೆ ವಿಫಲವಾಗಿದೆ. ಈ ವೇಳೆ ಆಕ್ರೋಶಭರಿತ ರೈತರು ಸಚಿವರ ವಿರುದ್ಧ ಘೋಷಣೆಗಳನ್ನು ಕೂಡ ಕೂಗಿದರು ಎನ್ನಲಾಗಿದೆ.
ಎಸ್ಎಪಿ ಕಾಯಿದೆ ಪರಿಣಾಮಕಾರಿ ಜಾರಿ ಹಾಗೂ ಕಬ್ಬು ಕಟಾವು, ರವಾನೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕೆಂದು ರೈತರು ಆಗ್ರಹಿಸಿದ್ದರು.