ಸುದ್ದಿ ಸಂಕ್ಷಿಪ್ತ
ಸಮಾವೇಶ : ಜಿಲ್ಲಾ ಬ್ರಾಹ್ಮಣ ಸಂಘದ ಪೂರ್ವಭಾವಿ ಸಭೆ ಫೆ.24,25
ಮೈಸೂರು, ಫೆ.6 : ಮೈಸೂರು ನಗರದ ಮತ್ತು ಜಿಲ್ಲಾ ಬ್ರಾಹ್ಮಣ ಸಂಘವು ಫೆ.24,25ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಪ್ರ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯನ್ನು ಫೆ.7ರ ಸಂಜೆ 6 ಗಂಟೆಗೆ ಅಗ್ರಹಾರದ ಶಂಕರಮಠದ ವಿದ್ಯಾಶಂಕರ ನಿಲಯದಲ್ಲಿ ಆಯೋಜಿಸಿದೆ.
ಇದರೊಂದಿಗೆ ಬ್ರಾಹ್ಮಣ ಮಹಾಸಭಾದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಮತ್ತು ಮಹಾನಗರ ಪಾಲಿಕೆ ಕಾಮಗಾರಿ ಯೋಜನಾ ಸಮಿತಿ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ನಡೆಯುವುದು.
ಕಾರ್ಯಕ್ರಮವು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ನಡೆಯಲಿದೆ, ಇಳೈ ಆಳ್ವಾರ್ ಸ್ವಾಮೀಜಿ, ಮಾಜಿ ಸಚಿವ ಎಸ್.ಎ.ರಾಮದಾಸ್, ಮುಖಂಡರಾದ ಗೋ.ಮಧುಸೂದನ್, ಮುಡಾ ಮಾಜಿ ಅಧ್ಯಕ್ಷ ಶ್ರೀನಿವಾಸ್ ಇನ್ನಿತರ ಸಮಾಜದ ಗಣ್ಯರು ಭಾಗಿಯಾಗುವರು. (ಕೆ.ಎಂ.ಆರ್)