ಪ್ರಮುಖ ಸುದ್ದಿಮೈಸೂರು

ಲಯ ತಪ್ಪಿದ ರೀತಿಯಲ್ಲಿ ಸಂಗೀತ ಮೊಳಗುತ್ತಿದೆ : ಬಿ.ಕೆ.ಸೋಮಶೇಖರ್

ಸಂಗೀತವನ್ನು ಬೆಳೆಸಬೇಕಾದರೆ ತನು ಹಾಗೂ ಮನವನ್ನು ಅರ್ಪಿಸಿಕೊಳ್ಳಬೇಕಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಉಚ್ಛನ್ಯಾಯಲಯಗಳ ಪೂರ್ವ ನ್ಯಾಯಮೂರ್ತಿ ಬಿ.ಕೆ ಸೋಮಶೇಖರ್ ಹೇಳಿದರು.

ಮೈಸೂರಿನ ಕುವೆಂಪು ನಗರದಲ್ಲಿರುವ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸಂಗೀತ ವಿಭಾಗದ ವತಿಯಿಂದ ಏರ್ಪಡಿಸಲಾದ ರಾಜ್ಯ ಮಟ್ಟದ ವಿಚಾರ ಸಂಕೀರಣ ಕರ್ನಾಟಕ ಸಂಗೀತದ ಪರಂಪರೆ ಮತ್ತು ನವ್ಯ ದೃಷ್ಟಿಕೋನ ಉದ್ಘಾಟಿಸಿ ಬಿ.ಕೆ.ಸೋಮಶೇಖರ್ ಮಾತನಾಡಿದರು. ಹಿಂದಿನ ಶಿಕ್ಷಣದಲ್ಲಿ ಸಂಗೀತಕ್ಕೂ ಒಂದು ಸ್ಥಾನಮಾನ ಕಲ್ಪಿಸಲಾಗಿತ್ತು. ಆದರೆ ಇಂದಿನ ಶಿಕ್ಷಣದಲ್ಲಿ ಸಂಗೀತಕ್ಕೆ ಒಲವು ಇಲ್ಲದಂತಾಗಿದೆ. ಲಯ ತಪ್ಪಿದ ರೀತಿಯಲ್ಲಿ ಸಂಗೀತ ಮೊಳಗುತ್ತಿದೆ ಎಂದು ಖೇದ ವ್ಯಕ್ತ ಪಡಿಸಿದರು.ಮುಂದಿನ ಪೀಳಿಗೆಗೆ ಸಂಗೀತದ ಕುರಿತು ಆಸಕ್ತಿ ಮೂಡಿಸಲು ಸಂಗೀತದ ಕುರಿತು ಹೆಚ್ಚಿನ ಪುಸ್ತಕಗಳನ್ನು ಹೊರ ತರುವ ಅಗತ್ಯವಿದೆ ಎಂದರು.

ಮೈಸೂರು ಮಹಾರಾಜರು ಸಂಗೀತಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ಕರ್ನಾಟಕ ಸಂಗೀತ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ತಿಳಿಸಿದರು. ಸಂಗೀತದ ಕುರಿತು ಜನರಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ವೈಣಿಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಲಲಿತ ಕಲಾ ಕಾಲೇಜಿನ ಡಾ. ರಾ. ವಿಶ್ವೇಶ್ವರನ್, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ  ಡಾ. ಸರ್ವಮಂಗಳಾ ಶಂಕರ್, ಕುಲಸಚಿವ ನಿರಂಜನ್ ವಾನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: