ಸುದ್ದಿ ಸಂಕ್ಷಿಪ್ತ

ತ್ರಿಚಕ್ರ ವಾಹನ ಅಪಘಾತ : ಅಂಗವಿಕಲ ವ್ಯಕ್ತಿ ಸಾವು

ರಾಜ್ಯ(ಮಡಿಕೇರಿ)ಫೆ.6:- ತ್ರಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲ ವ್ಯಕ್ತಿ ಮೃತಪಟ್ಟಿರುವ ಘಟನೆ ಕುಂಬಾರಬಾಣೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗರಗಂದೂರು ಗ್ರಾಪಂ ವ್ಯಾಪ್ತಿಯ ಕುಂಬಾರಬಾಣೆ ನಿವಾಸಿ ಮಣಿ(55) ಎಂದು ಗುರುತಿಸಲಾಗಿದೆ. ಜ.29ರಂದು ಬೆಳಗ್ಗಿನ ಜಾವ ಸರ್ಕಾರ ಉಚಿತವಾಗಿ ನೀಡಿದ್ದ ತ್ರಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಆಯತಪ್ಪಿ ಚರಂಡಿಯೊಳಗೆ ವಾಹನ ಮಗುಚಿಕೊಂಡಿದೆ. ಕೆಲ ಗಂಟೆಗಳ ನಂತರ ಕುಟುಂಬದವರ ಗಮನಕ್ಕೆ ಬಂದು ಗಾಯಾಳುವನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: