
ಪ್ರಮುಖ ಸುದ್ದಿಮೈಸೂರು
ಎಂ.ಕೆ.ಸೋಮಶೇಖರ್ ವಿರುದ್ಧ ದೂರು ದಾಖಲಿಸಿಕೊಳ್ಳಿ
ನನ್ನ ಮೇಲೆ ಕಾಂಗ್ರೆಸ್ ನ ಪಾಲಿಕೆ ಸದಸ್ಯರು ಹಾಗೂ ಶಾಸಕ ಎಂ.ಕೆ.ಸೋಮಶೇಖರ್ ಅವರು ಪದೇ ಪದೇ ಸುಳ್ಳು ಆರೋಪ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಅವರಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್ ದೂರು ದಾಖಲಿಸಿದ್ದಾರೆ.
ನಾನು ನೋಟಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ ಹಾಗೂ ಆರ್.ಬಿ.ಐ ನಿಯಮಾನುಸಾರ 18ವರ್ಷದಿಂದ ಅಲ್ಲಿ ಗೌರವ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆರ್.ಬಿ.ಐ ಕಾಯ್ದೆಯಡಿ ನೋಟಿನ ವಿನ್ಯಾಸವನ್ನು 4ರಿಂದ 8ಕ್ಕೆ ಮಾಡಲು ಸಲಹೆ ನೀಡಿದ್ದೇನೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಶಾಸಕರು ಒಬ್ಬ ಸಾರ್ವಜನಿಕ ಸೇವಕರಾಗಿದ್ದು ಎಲ್ಲಾ ಬಲ್ಲ ಮಾಹಿತಿಗಳನ್ನು ತಿಳಿದಿದ್ದರೂ ಕೂಡ ಪತ್ರಿಕಾ ಹೇಳಿಕೆಯನ್ನು ತಿರುಚಿ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ. ನ್ನ ಮೇಲೆ ವೈಯುಕ್ತಿಕ ಆರೋಪ ಮಾಡುತ್ತಿದ್ದು ಈ ಕುರಿತು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ದೂರನ್ನು ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರಾಮದಾಸ್ ಅವರ ಪರ ದೂರನ್ನು ಪಾಲಿಕೆಯ ಸದಸ್ಯ ಮಂಜುನಾಥ ದಾಖಲಿಸಿದರು.