
ಕರ್ನಾಟಕ
ಬಿಜೆಪಿ ಸೇರಿದ ವಿವಿಧ ಪಕ್ಷಗಳ ಕಾರ್ಯಕರ್ತರು
ರಾಜ್ಯ(ಮಡಿಕೇರಿ)ಫೆ.ಸೋಮವಾರಪೇಟೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪಕ್ಷಗಳ ಕಾರ್ಯಕರ್ತರುಗಳು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
ಗೌಡಳ್ಳಿಯ ಜಿ.ಟಿ. ಲೋಕೇಶ್, ಸಿ.ಎಂ. ರಾಜಪ್ಪ, ಜಿ.ಕೆ. ವಸಂತ್ ಆಚಾರ್, ಜಿ.ಎಂ. ಸಂಪತ್ ಆಚಾರ್ ಸೇರಿದಂತೆ ಇತರರು ಬಿಜೆಪಿ ಸೇರಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಸುನಿಲ್, ಪ್ರಸನ್ನ, ಶ್ರೀಕಾಂತ್, ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)