ಸುದ್ದಿ ಸಂಕ್ಷಿಪ್ತ

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಮೈಸೂರು, ಫೆ.7:- ಮೈಸೂರು ಕರ್ನಾಟಕ ರಾಜ್ಯ  ಸಫಾಯಿಕರ್ಮಚಾರಿ  ಅಭಿವೃದ್ಧಿ ನಿಗಮ ವತಿಯಿಂದ  ವಿವಿಧ  ಯೋಜನೆಗಳಿಗೆ 2017-18ನೇ ಸಾಲಿನಲ್ಲಿ ಅರ್ಹ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಯೋಜನೆ, ಸಫಾಯಿ ಕರ್ಮಚಾರಿ ಕೌಶಲ್ಯ ಅಭಿವೃದ್ಧಿ ತರಬೇತಿ, ಸಫಾಯಿ ಕರ್ಮಚಾರಿ ಮಕ್ಕಳನ್ನು ಪ್ರತಿಷ್ಠಿತ ಶಾಲಾ ಪ್ರವೇಶ ಯೋಜನೆ,     ಸಫಾಯಿ ಕರ್ಮಚಾರಿ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ವಿದ್ಯಾರ್ಥಿ ವೇತನ ಯೋಜನೆ, ಉದ್ಯಮಶೀಲತೆ ಯೋಜನೆ (ಸ್ವಯಂ ಉದ್ಯೋಗ ಯೋಜನೆ) ಹಾಗೂ ಸಫಾಯಿ ಕರ್ಮಚಾರಿ ನೇರಸಾಲ ಯೋಜನೆ
ಈ ಹಿಂದೆ ನಿಗಮದಿಂದ ಸಾಲ ಸೌಲಭ್ಯ ಪಡೆದು ಸಾಲ ಮರುಪಾವತಿ ಮಾಡಿರುವ ಹಾಗೂ ಸಾಲ ಮನ್ನಾ ಸೌಲಭ್ಯ ಪಡೆದವರು ಮತ್ತೊಮ್ಮೆ ಸಾಲ ಪಡೆಯಲು ಅರ್ಹರಿರುವುದಿಲ್ಲ. ಹಾಗೂ ಜಿಲ್ಲಾಧಿಕಾರಿಗಳಿಂದ ಅನುಮೋದಿಸಲ್ಪಟ್ಟ ಸರ್ವೆ ಪಟ್ಟಿಯಲ್ಲಿ ಕಡ್ಡಾಯವಾಗಿ ಸೇರ್ಪಡೆಯಾಗಿರಬೇಕು.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಫೆ.24ಆಗಿದ್ದು, ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಯನ್ನು ಜಿಲ್ಲಾ ಕಛೇರಿಯಲ್ಲಿ ವಿತರಿಸಲಾಗುವುದು. ಹಾಗೂ ತಾಲೂಕು ಮಟ್ಟದಲ್ಲಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿಗಳ ಮೂಲಕ ತಾಲೂಕು ಸಮಾಜ ಕಲ್ಯಾಣ ಇಲಾಖೆ/ತಾಲೂಕು ಪಂಚಾಯತ್ ಕಛೇರಿಗಳಲ್ಲಿ ವಿತರಿಸಲಾಗುವುದು.
ಅರ್ಜಿಯ ಶುಲ್ಕ ಇರುವುದಿಲ್ಲ. ಅರ್ಜಿ ಉಚಿತವಾಗಿ ವಿತರಿಸಲಾಗುವುದು. ಹೆಚ್ಚಿನ  ಮಾಹಿತಿಗಾಗಿ  ನಿಗಮದ ಜಿಲ್ಲಾ ಕಛೇರಿಯನ್ನು  ಸಂಪರ್ಕಿಸಬಹುದು. ಕಛೇರಿ ದೂರವಾಣಿ ಸಂಖ್ಯೆ: 0821-2332480 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: