ಮೈಸೂರು

ನಾದನೃತ್ಯೋತ್ಸವ-2016 ನ.25 ರಿಂದ 27ರವರೆಗೆ

ಮೈಸೂರಿನ ನಾದವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿಯ ದಶತಮಾನೋತಸವ ಸಂಭ್ರಮ “ನಾದನೃತ್ಯೋತ್ಸವ-2016 ಅನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ ಎಂದು ಶಾಲೆಯ ಖಜಾಂಚಿ ಮಿತ್ರಾ ನವೀನ್ ತಿಳಿಸಿದರು.

ಅವರು, ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.25 ರಿಂದ 27ರವರೆಗೆ ಪ್ರತಿ ದಿನ ಬೆಳಗ್ಗೆ 10:30 ರಿಂದ 1ರವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ 9ರವರೆಗೆ ಜಗನ್ಮೋಹನ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ನೃತ್ಯ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಸಮೂಹ ಸಂವಾದ ಸೇರಿದಂತೆ ವಿವಿಧ ಕಲಾ ಹಾಗೂ ವಾದ್ಯ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭದಲ್ಲಿ ನಾಟ್ಯಶಾಲೆಯಿಂದ “ನಮಿಸು” ಸಿಡಿಯನ್ನು ಬಿಡುಗಡೆಗೊಳಿಸಲಾಗುವುದು ಕಲಾಕೌಸ್ತುಭ ಸ್ಮರಣ ಸಂಚಿಕೆ, ಗಣ್ಯರಿಗೆ ಕಲಾವತಂಸ ಬಿರುದು ಪ್ರಧಾನ ಸಮಾರಂಭ ಹಾಗೂ ವೆಬ್‍ಸೈಟ್‍ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ನ.25ರಂದು ಬೆಳಗ್ಗೆ 10.30ಕ್ಕೆ ಇಸ್ಕಾನ್ ಅಧ್ಯಕ್ಷ ರಸಿಕ ಶೇಖರ್‍ ದಾಸ್ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥನಾದ ಸೋಮಶೇಖರ್ ಸ್ವಾಮೀಜಿ ಉದ್ಘಾಟಿಸುವರು. ರಂಗರಾವ್ ಮೆಮೋರಿಯಲ್ ಶಾಲೆಯ ಅಂಧ ಮಕ್ಕಳಿಂದ ಭರಟನಾಟ್ಯ, ವಿದುಷಿ ಸ್ಮಿತಾ ಶ್ರೀಕಿರಣ್‍ರಿಂದ ಕೊಳಲು ವಿದ್ವಾನ್ ಎ.ವಿ.ದತ್ತಾತ್ರೇಯ ಕೃತಿಮಾಲ ಮೆಂಡೋಲಿನ ವಾದ್ಯದೊಂದಿಗೆ ಸಂಜೆ ಕಾರ್ಯಕ್ರಮವನ್ನು ಶಾಸಕ ವಾಸು, ಗಣೇಶ್ ಬೀಡಿಯ ವ್ಯವಸ್ಥಾಪಕ ಭಾಗಿದಾರಿ ಜಗನ್ನಾಥ್ ಶೆಣೈ, ಕಲಾಸೇವಾ ರತ್ನ ಕೆ.ವಿ.ಮೂರ್ತಿ ಉದ್ಘಾಟಿಸಿ ನಮಿಸಿ ಸಿಡಿಯನ್ನು ಬಿಡುಗಡೆಗೊಳಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

ನ.26ರಂದು ಬೆಳಗ್ಗೆ 10ಕ್ಕೆ ನಗರಪಾಲಿಕೆ ಸದಸ್ಯರಾದ ಮಹದೇವಪ್ಪ, ಸ್ನೇಕ್ ಶ್ಯಾಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೆನ್ನಪ್ಪ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

ನ.27ರಂದು  ಬೆಳಿಗ್ಗೆ 10ಕ್ಕೆ ಮೈಸೂರಿನ ನೃತ್ಯಶಾಲಾ ವಿದ್ಯಾರ್ಥಿಗಳಿಗಾಗಿ ಕ್ವಿಜ್ ಹಾಗೂ ನಾದನೃತ್ಯ ಸಮೂಹ ಸಂವಾದವನ್ನು ಏರ್ಪಡಿಸಿದ್ದು ಸಂವಾದದಲ್ಲಿ ಪ್ರೊ.ರಾಮಮೂರ್ತಿ ರಾವ್, ಡಾ.ತುಳಸಿ ರಾಮಚಂದ್ರ, ಡಾ.ಎಂ.ಸೂರ್ಯ ಪ್ರಸಾದ್, ವಿದುಷಿ ನಂದಿನಿ ಈಶ್ವರ್, ಬೆಳ್ತಂಗಡಿಯ ಕಮಲಾಕ್ಷಾಚಾರ್, ಬೆಂಗಳೂರಿನ ವೆಂಕಟೇಶ್ ಹಾಗೂ ಇತರರು ಪಾಲ್ಗೊಳ್ಳವರು.

ಕಾರ್ಯಕ್ರಮದಲ್ಲಿ ಮೂರು ವರ್ಷದ ಎಳೆಯರಿಂದ ಹಿಡಿದು 95 ವರ್ಷದ ಹಿರಿಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು. ಮೂರರಿಂದ ನಾಲ್ಕು ಸಾವಿರದವರೆಗೂ ಪ್ರೇಕ್ಷಕರು ಪಾಲ್ಗೊಳ್ಳುವರು. ಕಳೆದ ಹತ್ತು ವರ್ಷಗಳಿಂದಲೂ ನೃತ್ಯಶಾಲೆಯು ಉತ್ತಮ ಸೇವೆಯನ್ನು ನೀಡುತ್ತಿದ್ದು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುತ್ತಿದೆ. ಪ್ರಸ್ತುತ 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿದುಷಿ ಎಂ.ಎಸ್.ನವೀನ್, ಕಾರ್ಯಕಾರಿ ಸಮಿತಿಯ ಕೆ.ವಿ.ಮೂರ್ತಿ, ಶೋಭಾ ಸೂರ್ಯನಾರಾಯಣ್ ಮತ್ತು ಪೂರ್ಣಿಮಾ ವಿಶ್ವನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: