
ಮೈಸೂರು
ಮುಗಿದ ವೀಸಾ ಅವಧಿ ; ಅನಧಿಕೃತ ವಾಸ : ಮೂವರ ಬಂಧನ
ಮೈಸೂರು,ಫೆ.7:- ವೀಸಾ ಅವಧಿ ಮುಗಿದಿದ್ದರೂ ಕೂಡ ಮೈಸೂರು ನಗರದಲ್ಲಿ ಅನಧಿಕೃತವಾಗಿ ವಾಸವಿದ್ದ ಮೂವರು ತಾಂಜೇನಿಯ ಪ್ರಜೆಗಳನ್ನು ಬಂಧಿಸಲಾಗಿದೆ.
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸವಿದ್ದ ಮೂವರು ತಾಂಜೇನಿಯ ಪ್ರಜೆಗಳಾದ ಅತುಪಿಲೆ ಫ್ರೈಡೆ ಮ್ವಾಕ್ಯುಸ, ಇವೆನ್ಸ್ ಡಾಮನ್ಸಿ ಮಲೆ, ಐಡಿನ್ ಎಮಿಲಿಯನ್ ರಿವಾ ಅವರನ್ನು ಬಂಧಿಸಿ ದೋಷಾರೋಪಣ ಸಲ್ಲಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇವರನ್ನು ವಿಚಾರಣೆ ನಡೆಸಿದ ನಗರದ ನಾಲ್ಕನೇ ಜೆ.ಎಂ.ಎಫ್ ಸಿ ನ್ಯಾಯಾಲಯ ಒಂದು ತಿಂಗಳ ಸಾದಾ ಸಜೆ ಮತ್ತು 8,000ರೂ.ದಂಡ ವಿಧಿಸಿದೆ. (ಕೆ.ಎಸ್,ಎಸ್.ಎಚ್)