ಮೈಸೂರು

ವಿದ್ಯಾರ್ಥಿನಿಲಯ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಿದ ವಾಸು

ಮೈಸೂರು,ಫೆ.7:- 2017-18ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮರಾಠ ಕ್ಷತ್ರಿಯ ಟ್ರಸ್ಟ್ ಅವರು ಮಂಡಿಮೊಹಲ್ಲಾ ಫೌಂಟೇನ್ ರಸ್ತೆ ಕ್ರಾಸ್ 75 ಮತ್ತು 76ನೇ ಸಂಖ್ಯೆ ನಿವೇಶನದಲ್ಲಿ ವಿದ್ಯಾರ್ಥಿನಿಲಯ ಕಾಮಗಾರಿಯನ್ನು 25ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಲಿದ್ದು ಶಾಸಕ ವಾಸು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭ ಮರಾಠ ಕ್ಷತ್ರಿಯ ಟ್ರಸ್ಟ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪಾಲಿಕೆ ಸದಸ್ಯರಾದ ಸುಹೇಲ್ ಬೇಗ್, ಪ್ರಶಾಂತಗೌಡ, ಗುತ್ತಿಗೆದಾರ ಎಸ್.ಸಂದೇಶ್, ಈ. ಶಂಕರ್ ರಾವ್, ಎಸ್.ರಾಮ್ ಜಿರಾವ್, ಡಿ.ದಿವಾಕರ ರಾವ್, ಡಿ.ಲಕ್ಷ್ಮಣ್, ಕೆ.ವಿ.ಮಂಜುನಾಥ್ ರಾವ್, ಕೆ.ಕುಮಾರ್, ರವಿಕುಮಾರ್, ಕೆ.ವಿ.ಸದಾನಂದ ರಾವ್, ವಿ.ಅಶೋಕ್ ಕುಮಾರ್, ಜಿ.ರಾಮರಾವ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: