ಮೈಸೂರು

ನಾಣ್ಯ ಬಿಡುಗಡೆಗೊಳಿಸುತ್ತಿರುವ ದೇಶದ 2ನೇ ವಿವಿ ಹೆಗ್ಗಳಿಕೆ

ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಂಭ್ರಮದಲ್ಲಿ ನಾಣ್ಯ ಬಿಡುಗಡೆಗೊಳ್ಳಲಿದೆ. ಇನ್ನೂ ನೋಟಿನ ರಗಳೆಯೇ ಮುಗಿದಿಲ್ಲ ಇನ್ಯಾವ ಹೊಸ ನಾಣ್ಯ ಬಂದು ಗೊಂದಲ ಸೃಷ್ಟಿಸಲಿದೆ ಎಂದು ಗಾಬರಿಯಾಗಬೇಡಿ. ಮೈಸೂರು ವಿವಿ ಶತಮಾನೋತ್ಸವ ಸ್ಮರಣಾರ್ಥ ಐದು ಹಾಗೂ ನೂರು ರೂ.ನಾಣ್ಯ ಬಿಡುಗಡೆಗೊಳ್ಳಲಿದ್ದು, ಸಾರ್ವಜನಿಕರ ಚಲಾವಣೆಗೆ ಲಭ್ಯವಿಲ್ಲ.  ಇದು ಕೇವಲ ಸಂಗ್ರಹಣೆಗಾಗಿ ಮಾತ್ರವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯ ಶತಮಾನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಹಣಕಾಸು ಇಲಾಖೆಗೆ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿತ್ತು. ಇಲಾಖೆ ಅಸ್ತು ಎಂದಿದ್ದು ನಾಣ್ಯದ ವಿನ್ಯಾಸ  ಅಂತಿಮ ಗೊಂಡಿದೆಯಂತೆ. ಈ ಮೂಲಕ ದೇಶದಲ್ಲಿ ಶತಮಾನೋತ್ಸವ ಪ್ರಯುಕ್ತ ನಾಣ್ಯ ಹೊರತರುತ್ತಿರುವ ಎರಡನೇ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೂ  ಮೈಸೂರು ವಿವಿ ಪಾತ್ರವಾಗಲಿದೆ.

Leave a Reply

comments

Related Articles

error: