ಮೈಸೂರು

ಎಲ್ಲಾ ಸಾಂಸ್ಕೃತಿಕ ಕಲೆಗಳು ನಮ್ಮ ಪಠ್ಯ ಕ್ರಮಗಳಲ್ಲಿ ಅಡಕವಾಗಬೇಕು : ಮಲ್ಲಿಕಾರ್ಜುನಸ್ವಾಮಿ

ಮೈಸೂರು,ಫೆ.7:- ನಮ್ಮ ಎಲ್ಲಾ ಸಾಂಸ್ಕೃತಿಕ  ಕಲೆಗಳು ನಮ್ಮ ಪಠ್ಯ ಕ್ರಮಗಳಲ್ಲಿ ಅಡಕವಾಗಬೇಕು ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

ಕಲಾಮಂದಿರದ  ಕಿರುರಂಗಮಂದಿರದಲ್ಲಿ ರಂಗಾಯಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಲಾದ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಶಿಕ್ಷಣ ಪದ್ದತಿಯಲ್ಲಿ ಇನ್ನೂ ಗುಮಾಸ್ತ ಹುದ್ದೆಗೆ ಬೇಕಾದ ಶಿಕ್ಷಣವೇ ಇದೆ. ಅದನ್ನು ಬ್ರಿಟಿಷರು ಇಲ್ಲೇ ಬಿಟ್ಟು ಹೋಗಿದ್ದಾರೆ. ಇದರಿಂದ ನಾವು ಹೊರ ಬಂದು ರಂಗಭೂಮಿಯಲ್ಲಿ ತೊಡಗಿಕೊಳ್ಳುವುದು ಅವಶ್ಯಕವಾಗಿದೆ. ರಂಗಭೂಮಿ ಸಾರ್ವಜನಿಕರಲ್ಲಿ ಕ್ರಾಂತಿಯನ್ನು, ಉತ್ತೇಜನವನ್ನು ನೀಡುತ್ತದೆ ಎಂದು ತಿಳಿಸಿದರು. ರಂಗಾಯಣದ ನಿರ್ದೇಶಕಿ ಭಾಗೀರಥಿ ಭಾಯಿ ಕದಂ ಮಾತನಾಡಿ ರಂಗದಲ್ಲಿರುವವರು ಮತ್ತು ಅಧಿಕಾರಿಗಳ ನಡುವೆ ಸಾಮರಸ್ಯವಿರುವುದರಿಂದ ರಂಗಾಯಣದ ಸಹೋದ್ಯೋಗಿಗಳು ಈ ಕಾರ್ಯಕ್ಕೆ ಸಹಕರಿಸಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ  ಹಿರಿಯ ಕಲಾವಿದೆ ರಾಮೇಶ್ವರಿ ವರ್ಮಾ ಬುಧವಾರ ಚಾಲನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: