ಪ್ರಮುಖ ಸುದ್ದಿಮೈಸೂರು

ಪಿರಿಯಾಪಟ್ಟಣ ಪಿಡಿಓ ಚಂದ್ರಪ್ಪ ಎಸಿಬಿ ಬಲೆಗೆ

ಪಿರಿಯಾಪಟ್ಟಣ ಪಿಡಿಓ ಚಂದ್ರಪ್ಪ ಎಂಬವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಶ್ರೀನಿವಾಸ್ ಎಂಬವರಿಗೆ ಮನೆ ನಿರ್ಮಾಣಕ್ಕೆ ಬಿಲ್ ಮಂಜೂರು ಮಾಡುವಂತೆ ಪಿಡಿಓ ಅವರ ಬಳಿ ಹೇಳಿದ ಸಂದರ್ಭ 4 ಸಾವಿರ ರು. ಲಂಚ ನೀಡುವಂತೆ ಪೀಡಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಶ್ರೀನಿವಾಸ್ ಎಸಿಬಿಗೆ ದೂರು ನೀಡಿದ್ದು, ಮಂಗಳವಾರದಂದು ಪಿಡಿಓಚಂದ್ರಪ್ಪ 2 ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ್ದಾರೆ. ಪಿಡಿಓ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಎಸ್‍ಪಿ ಕವಿತಾ, ಅನಿಲ್ ಕುಮಾರ್, ಮಧು ಮತ್ತಿತರರು ದಾಳಿ ನಡೆಸಿದ ತಂಡದಲ್ಲಿದ್ದರು.

Leave a Reply

comments

Related Articles

error: