ಮೈಸೂರು

ಯಾವುದೇ ನೇಮಕಾತಿ ಸದ್ಯಕ್ಕಿಲ್ಲ : ಪ್ರೊ.ರಂಗಪ್ಪ ಸ್ಪಷ್ಟನೆ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ನೇಮಕಾತಿ ಇಲ್ಲ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ಪಷ್ಟಪಡಿಸಿದ್ದಾರೆ.

ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಅತ್ಯುತ್ತಮ ವಿವಿ ಎಂದು ಇಂದಿರಾ  ಗಾಂಧಿ ರಾಷ್ಟ್ರೀಯ ಎನ್‍ಎಸ್‍ಎಸ್ ಪ್ರಶಸ್ತಿ  ಲಭಿಸಿತ್ತು. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕೆ. ಕಾಳಚನ್ನೇಗೌಡ ಅವರಿಗೆ ಅತ್ಯುತ್ತಮ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರು ಇತ್ತೀಚೆಗೆ ದೆಹಲಿಯಲ್ಲಿ  ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಆ ಪ್ರಯುಕ್ತ  ಕ್ರಾಫರ್ಡ್ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ  ಕೆ.ಎಸ್.ರಂಗಪ್ಪ ಮಾತನಾಡಿದರು. ಸರ್ಕಾರವೇ ನೇಮಕಾತಿಯನ್ನು ನಡೆಸಲು ಸಮ್ಮತಿ ನೀಡಿಲ್ಲ. ಈ ಕಾರಣದಿಂದ ನೇಮಕಾತಿಯನ್ನು ಮುಂದೂಡಲಾಗಿದೆ ಎಂದರು.

ತಾವು ಕುಲಪತಿಗಳಾದ ನಂತರ ಈ ಹಿಂದೆ ಸ್ಥಗಿತಗೊಂಡಿದ್ದ ಎನ್‍ಎಸ್‍ಎಸ್ ವಿಭಾಗಕ್ಕೆ ಮರು ಚಾಲನೆ ದೊರೆತಿದೆ. ನಂತರದ ದಿನಗಳಲ್ಲಿ  ಹಲವಾರು ಸಸಿಗಳನ್ನು ನೆಡಲಾಗಿದ್ದು ಅವುಗಳು ಮರಗಳಾಗಿ ಬೆಳೆಯುತ್ತಿವೆ. ಅವುಗಳನ್ನು ಹಾಗೂ  ಸ್ವಚ್ಛತೆಗೆ ನೀಡಿದ ಕೊಡುಗೆಗಳನ್ನು ಗಮನಿಸಿ  ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದರು. ದೇಶದಾದ್ಯಂತ ಸುಮಾರು 450 ವಿವಿಗಳು ಸ್ಪರ್ಧಿಸಿದ್ದವು. ಇದರಲ್ಲಿ ಮೈಸೂರು ವಿವಿಯೂ ಪಾಲ್ಗೊಂಡಿತ್ತು. ಕೊನೆಗೂ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಸದ್ಯದಲ್ಲೇ  ವಿವಿ ಶತಮಾನೋತ್ಸವ ನಡೆಯಲಿದ್ದು, ಶತಮಾನೋತ್ಸವದ ಅಂಗವಾಗಿ ಐದು ಮತ್ತು ನೂರು ರೂ. ನಾಣ್ಯವನ್ನು ಕೇಂದ್ರ ಸಚಿವ ವೆಂಕಯ್ಯನಾಯ್ಡು ಅಂದು ವಿವಿ ಆಯೋಜಿಸುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆಂದು ತಿಳಿಸಿದರು.

ಈ ಸಂದರ್ಭ ಕುಲಸಚಿವ ರಾಜಣ್ಣ ಉಪಸ್ಥಿತರಿದ್ದರು.

Leave a Reply

comments

Related Articles

error: