ಮೈಸೂರು

ವರುಣಾ ಹೋಬಳಿಯ ರೈತರಿಗೆ ಅನುದಾನ ಬಿಡುಗಡೆ: ಸಮಗ್ರ ತನಿಖೆಯಾಗಲಿ

ವರುಣಾ ಹೋಬಳಿಯ ರೈತರಿಗೆ ಭೂಮಿ ಪರಿಹಾರ ಧನವನ್ನು ಸರ್ಕಾರ ಬಿಡುಗಡೆಗೊಳಿಸಿದ್ದು ಅನುದಾನ ಬಿಡುಗಡೆಯಲ್ಲಿ ಸರ್ಕಾರವು ತಾರತಮ್ಯವೆಸಗಿದೆ ಎಂದು ಮಾಜಿ ಮಹಾಪೌರ ಸಂದೇಶ ಸ್ವಾಮಿ ಸರ್ಕಾರದ ತಾರತಮ್ಯ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರು, ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2004ರಲ್ಲಿ ಕಬಿನಿ ಜಲಾಶಯದ ಕುಡಿಯುವ ನೀರು ಉದ್ದೇಶಿಸಿ ಸುಮಾರು 4732 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು.ಇಂದಿಗೂ ನೂರಾರು ಜನ ರೈತರಿಗೆ ಯಾವುದೇ ಅನುದಾನ ಲಭಿಸಿಲ್ಲ. ಜಮೀನು ಕಳೆದುಕೊಂಡ ರೈತರು ಅದೇ ಭೂಮಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. 2004ರಲ್ಲಿ  ಸಮಯದಲ್ಲಿ ಪ್ರತಿ ಎಕರೆಗೆ ಎಪ್ಪತ್ತೇರಡು ಸಾವಿರ ರೂಪಾಯಿ ನಿಗದಿಯಾಗಿತ್ತು. ನಂತರದ ದಿನಗಳಲ್ಲಿ ಎರಡು ಲಕ್ಷಕ್ಕೆ ಏರಿಕೆಯಾಯಿತು. ನ.5ರಂದು ವರುಣಾ ಹೋಬಳಿಯ ರೈತರಿಗೆ ಪ್ರತಿ ಎಕರೆಗೆ ಹನ್ನೆರಡು ಲಕ್ಷ ರುಪಾಯಿ ಘೋಷಿಸಿದ್ದು ಅನುದಾನ ಹಂಚಿಕೆಯಲ್ಲಿ ತಾರತಮ್ಯವೆಸಗಿದ್ದು ಭೂಮಿ ಕಳೆದುಕೊಂಡ ಪ್ರತಿ ರೈತರಿಗೂ ಇದೇ ರೀತಿಯಾಗಿ ಹಣ ಬಿಡುಗಡೆಗೊಳಿಸಲಿ. ಅಲ್ಲದೇ, ನ್ಯಾಯಾಲಯದಲ್ಲಿ ಅಕ್ಷೇಪಣಾ ಅರ್ಜಿಯನ್ನು ಮೂವತ್ತು ದಿನಗಳಲ್ಲಿಯೇ ಸಲ್ಲಿಸಬೇಕೆಂದು ಕಾನೂನಿದ್ದರೂ ಸುಮಾರು ಹತ್ತು ವರ್ಷಗಳ ನಂತರ ಏಕಾಏಕಿ ಪ್ರಕರಣಗಳು ಇತ್ಯರ್ಥಗೊಂಡಿದ್ದು ಈ ಬಗ್ಗೆ ಇಲಾಖೆ ಅಧಿಕಾರಗಳ ಹಾಗೂ ಸರ್ಕಾರದ ನಡೆ ಅನುಮಾನಕ್ಕೆ ಎಡೆಯಾಗಿದ್ದು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಹೇಮಾವತಿ, ಕಾವೇರಿ ಜಲಾಶಯದ ವ್ಯಾಪ್ತಿಯಲ್ಲಿ ಭೂಮಿ ಕಳೆದಕೊಂಡ ರೈತರಿಗೆ ತ್ವರಿತವಾಗಿ ಹಾಗೂ ತಾರತಮ್ಯವಿಲ್ಲದೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ, ರೈತರು ವಕೀಲರನ್ನು ನೇಮಿಸಿಕೊಂಡು ನ್ಯಾಯಕ್ಕಾಗಿ ಹೋರಾಡಿ. ಸರ್ಕಾರವು ಬಿಡುಗಡೆಗೊಳಿಸುವ ಅನುದಾನವು ಮಧ್ಯವರ್ತಿಗಳ ಹಾಗೂ ಅಧಿಕಾರಿಗಳ ಪಾಲಾಗುತ್ತಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆ ಸದಸ್ಯರಾದ ರಾಮ್, ಪೈರೋಜ್ ಖಾನ್, ಮಹದೇವಪ್ಪ ಹಾಗೂ ಮಾಜಿ ಸದಸ್ಯ ಮಹೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: