
ಮೈಸೂರು
ಮೈಸೂರು ವಿವಿ ಕಾರ್ಯಸೌಧದ ಎದುರು ನಾಗಪ್ಪ..!
ಮೈಸೂರು,ಫೆ.8:- ಹಾವು ಅಂದ್ರೇನೇ ಭಯ ಅದರಲ್ಲೂ ಹಾವು ಎದುರಿಗೆ ಬಂದರೆ ಕೇಳ್ಬೇಕಾ..?ಗೋಧಿ ಬಣ್ಣದ ಐದು ಅಡಿ ಉದ್ದದ ನಾಗಪ್ಪ ಕಾರ್ಯಸೌಧದ ಎದುರಿನ ಹಸಿರು ಹುಲ್ಲಿನ ಹಾಸಿನ ಮೇಲೆ ಕಾಣಿಸಿಕೊಂಡಿದ್ದಾನೆ.
ಮೈಸೂರಿನ ವಿಶ್ವವಿದ್ಯಾನಿಲಯದ ಕಾರ್ಯಸೌಧದ ಎದುರು ಐದು ಅಡಿ ಉದ್ದದ ನಾಗಪ್ಪ ಕಾಣಿಸಿಕೊಂಡು ಎಲ್ಲರಲ್ಲೂ ಭೀತಿ ಹುಟ್ಟಿಸಿದ ಘಟನೆ ನಡೆದಿದೆ. ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧದಲ್ಲಿ ಪ್ರತ್ಯಕ್ಷ ಗೊಂಡ ನಾಗರಹಾವನ್ನು ನೋಡಿ ಗಾಭರಿಗೊಂಡ ಸಿಬ್ಬಂದಿಗಳು ಉರಗತಜ್ಞ ಸ್ನೇಕ್ ರಮೇಶ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ ಸಮಯಕ್ಕೆ ಸರಿಯಾಗಿ ಬಂದ ಸ್ನೇಕ್ ರಮೇಶ್ ಅವರು ಕಾರ್ಯಸೌಧದ ಎದುರು ಇರುವ ಉದ್ಯಾನ ವನದಲ್ಲಿರುವ ಪೊದೆಯಲ್ಲಿ ಅಡಗಿ ಕುಳಿತಿದ್ದ ಹಾವನ್ನು ರಕ್ಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರನೇಕರು ಹಾವು ಹಿಡಿಯುವ ದೃಶ್ಯವನ್ನು ನೋಡಲು ಮುಗಿಬಿದ್ದರು. ಈ ಸಂದರ್ಭ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ರಮೇಶ್ ಕಾರ್ಯಸೌಧದಲ್ಲಿ ಇದು ನಾನು ಹಿಡಿಯುತ್ತಿರುವ ನಾಲ್ಕನೇ ನಾಲ್ಕನೇ ಹಾವು. ಇಲ್ಲಿ ಹಿಡಿದ ಹಾವನ್ನು ರಕ್ಷಣೆ ಮಾಡಿದ್ದೇನೆ. ನಾನು ಹಿಡಿದ ಹಾವುಗಳನ್ನೆಲ್ಲ ಚಾಮುಂಡಿ ಬೆಟ್ಟದ ಕಾಡಿಗೆ ಅಥವಾ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡುತ್ತೇನೆ ಎಂದು ತಿಳಿಸಿದರು.
ಹಾವು ಹೆಡೆ ಎತ್ತಿ ಕುಳಿತಿದ್ದು, ಅದನ್ನು ಸಾರ್ವಜನಿಕರು ತಮ್ಮ ಮೊಬೈಲ್ ಗಳಲ್ಲಿ ಕ್ಲಿಕ್ಕಿಸಿಕೊಂಡರು. (ಕೆ.ಎಸ್,ಎಸ್.ಎಚ್)