ಮೈಸೂರು

ದೇಶದ ರಕ್ಷಣಾ ವಲಯಕ್ಕೆ ವಿಶಿಷ್ಠ ಕೊಡುಗೆ ನೀಡಿದ ಯುವ ವಿಜ್ಞಾನಿ ‘ಎಂ.ಎನ್.ಪ್ರತಾಪ್’ ಮೈಸೂರಿನವರು

ಮೈಸೂರು, ಫೆ.8 : ದೇಶದ ರಕ್ಷಣಾ ವ್ಯವಸ್ಥೆಯ ಪ್ರತಿಷ್ಠಿತ ‘ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಅರ್ಗನೈಸೇಷನ್ ತಂತ್ರಜ್ಞಾನವನ್ನು ಆವಿಷ್ಕಾರಿಸಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್ ನಮ್ಮ ಕಾಲೇಜಿನ ವಿದ್ಯಾರ್ಥಿ ಎಂದು ಎಂದು ಜೆಎಸ್ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯಸ್ಥರಾದ ಪ್ರೊ.ಡಿ.ವಿ.ಸಾಂಬಶಿವಯ್ಯ ಹೆಮ್ಮೆಯಿಂದ ಬೀಗಿದರು.

ಕಾಲೇಜಿನ ತೃತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಯುವ ವಿಜ್ಞಾನಿ ಪ್ರತಾಪ್, ಜಪಾನಿನ ಟೋಕೀಯೋದಲ್ಲಿ ನ.29 ರಿಂದ ಡಿ.2ರವರೆಗೆ ನಡೆದ ಅಂತರಾಷ್ಟ್ರೀಯ ರೊಬೋಟಿಕ್ಸ್ ಪ್ರದರ್ಶನದಲ್ಲಿ ಭಾಗಿಯಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಸೇರಿದಂತೆ, . 10 ಸಾವಿರ ಅಮೆರಿಕನ್ ಡಾಲರ್ ನಗದು ಬಹುಮಾನ ‘ಯುವ ವಿಜ್ಞಾನಿ’ ಎಂಬಾ ಘೋಷಣೆ ಮಾಡಲಾಗಿದ್ದು ಇವರ ಸಾಧನೆಯು ದೇಶದ ರಕ್ಷಣಾ ವಲಯದಲ್ಲಿ ಪರಿಣಾಮಕಾರಿ ಪಾತ್ರ ವಹಿಸುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವ ವಿಜ್ಞಾನಿ ಪ್ರತಾಪ್ ಮಾತನಾಡಿ . ಈಗಾಗಲೇ ಗಡಿ ರಕ್ಷಣೆ ಪಡೆಯಲಿ ಟೆಲಿಗ್ರಾಫಿ, ಡ್ರೋನ್ ನೆಟ್ ವರ್ಕಿಂಗ್ ನಲ್ಲಿ ಗೂಡಲೇಖನಶಾಸ್ತ್ರದ ಅಳವಡಿಕೆ, ವಾಹನ ದಟ್ಟಣೆ ನಿರ್ವಹಣೆಗಾಗಿ ಡ್ರೋನ್ ನೆಟ್ ವರ್ಕಿಂಗ್ , ರಾಷ್ಟ್ರಿಯ ಸಮಾಜ-ರಕ್ಷಣಾ ಕಾರ್ಯದಲ್ಲಿ ಡ್ರೋನ್ ಬಳಕೆ, ಜರನ್ನು ರಕ್ಷಿಸುವಲ್ಲಿ ಮಾನವರಹಿತ ವೈಮಾನಿಕ ವಾಹನ (UAV- Unmanned aerial vehicle) ಪ್ರಮುಖ ಯೋಜನೆಗಳಾಗಿದ್ದು ರಕ್ಷಣಾ ವಲಯದಲ್ಲಿ ಮಹತ್ವ ಪಾತ್ರವಹಿಸಲಿವೆ ಎಂದರು. .

ಮಳವಳ್ಳಿ ತಾಲ್ಲೂಕಿನ ನೆಟಕಲ್ ಗ್ರಾಮದ ಸಾಧಾರಣ ರೈತಾಪಿ ಕುಟುಂಬಕ್ಕೆ ಸೇರಿದ ನನಗೆ, ತಂದೆ,ತಾಯಿ ಸೇರಿದಂತೆ, ಜೆಎಸ್ಎಸ್ ಸಂಸ್ಥೆ, ಅಧ್ಯಾಪಕ ವರ್ಗ ನನ್ನ ಪ್ರಯೋಗಕ್ಕೆ ಬೆಂಬಲದೊಂದಿಗೆ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೇ ಸಂಶೋಧನೆ ನಡೆಸಲು ಸಹಕರಿಸಿದ ಡಿಆರ್ಡಿಓ ಅನ್ನು ಸ್ಮರಿಸಿ, ಹೆಲಿಕಾಪ್ಟರ್ ಹಾರಾಟದಿಂದ ಪ್ರೇರಿತನಾದ ನಾನು ಡ್ರೋಣ್ ತಯಾರಿಸಲು ಆಸಕ್ತಿ ಮೂಡಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡು ದೇಶಕ್ಕಾಗಿಯೇ ನನ್ನ ಸೇವೆ ಮುಡುಪಿಡುವೆ, ದೇಶದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಸಂಶೋಧನೆ ನಡೆಸಬೇಕೆಂಬ  ಆಸೆಯಿದೆ ಎಂದು ಹೇಳಿದರು..

ಗೋಷ್ಠಿಯಲ್ಲಿ ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರಾದ ಮಹದೇವಪ್ಪ, 0ಸದಾಶಿವಮೂರ್ತಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: