ಮೈಸೂರು

ನಾಡಪ್ರಭು ಕೆಂಪೇಗೌಡರ ವೃತ್ತ : ಜಾಗೃತಿಗಾಗಿ ಫೆ.9ರಂದು ತೈಲವರ್ಣ ಚಿತ್ರ ರಚನೆ

ಮೈಸೂರು, ಫೆ.8 : ನಗರದ ಹೊರವಲಯದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಬಳಿಯ ವೃತ್ತಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರಿಟ್ಟಿದ್ದು ಅದರ ಜಾಗೃತಿಗಾಗಿ. ಕಲಾವಿದ ಅರ್ಜುನ್ ಆರ್ಯನ್ ಗೌಡ ಅವರಿಂದ ಕೆಂಪೇಗೌಡರ ತೈಲವರ್ಣಚಿತ್ರ ರಚನೆಯನ್ನು ಏರ್ಪಡಿಸಿದೆ.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ  ಫೆ. 9ರಂದು ಬೆಳಗ್ಗೆ 11 ಗಂಟೆಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಮಾಜಿ ಸಂಸದ ಹೆಚ್.ವಿಶ್ವನಾಥ್ ಉದ್ಘಾಟಿಸುವರು, ಕ.ರಾ.ಒ.ವಿ.ವೇದಿಕೆ ಸಂಸ್ಥಾಪಕಿ ಹೆಚ್.ಎಲ್.ಯಮುನಾ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹೆಚ್.ಸಿ.ಬಸವರಾಜ್, ಮಾಜಿ ಮಹಾಪೌರ ಸಂದೇಶ್ ಸ್ವಾಮಿ, ಅಂತರಾಷ್ಟ್ರೀಕ ಕಲಾವಿದ ಬಿ.ಡಿ.ಜಗದೀಶ್, ಸಮಾಜ ಸೇವಕ ರಘುರಾಮ್ ವಾಜಪೇಯಿ, ಚಿಂತಕ ಡಿ.ಕೆ.ಪ್ರೇಮಕುಮಾರ್ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಸನ್ನಕುಮಾರ್, ಪತ್ರಕರ್ತ ಬಿ.ಗುರುರಾಜ್ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗುವರು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕ.ರಾ.ಒ.ವಿ.ವೇದಿಕೆ ಅಧ್ಯಕ್ಷೆ ಹೆಚ್.ಎಲ್.ಯಮುನಾ ತಿಳಿಸಿದರು.

ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂದು ಬೆಂಗಳೂರು ಕೆಂಪೇಗೌಡ ಕೇಂದ್ರ ಸಮಿತಿಯ ಮರಿಮಲ್ಲಯ್ಯನವರು  ಸಲ್ಲಿಸಿದ್ದ ಅರ್ಜಿಯನ್ನು ಸಂದೇಶ್ ಸ್ವಾಮಿಯವರು ಮೇಯರ್ ಆಗಿದ್ದ ಸಮಯದಲ್ಲಿಯೇ ಅನುಮೋದಿಸಲಾಗಿದ್ದು, ಆದರೆ ಇಂದಿಗೂ ಆ ಹೆಸರನ್ನು ವೃತ್ತಕ್ಕೆ ನಾಮಕರಣಗೊಳಿಸದ ಮಹಾನಗರ ಪಾಲಿಕೆ ವಿಳಂಬ ನೀತಿಗೆ . ಅಸಮಾಧಾನ ವ್ಯಕ್ತಪಡಿಸಿ ಇದರ ಬಗ್ಗೆ ಜಾಗೃತಿಗಾಗಿ ಆ ದಿನ ಕೆಂಪೇಗೌಡರ ತೈಲವರ್ಣ ಚಿತ್ರ ರಚಿಸಿ ಮೇಯರ್ ಭಾಗ್ಯವತಿಗೆ ಸಲ್ಲಿಸುವ ಮೂಲಕ ವೃತ್ತಕ್ಕೆ ಕೆಂಪೇಗೌಡ ಹೆಸರನ್ನು ಬರೆಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಿರ್ದೇಶಕರಾದ ಹಂಚ್ಯ ಸ್ವಾಮಿಗೌಡ, ವಿಜಯೇಂದ್ರ, ದಾಸೇಗೌಡ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: