
ಕೇಂದ್ರ ಸರ್ಕಾರವು ನೋಟು ಅಮಾನ್ಯದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು ಸಾಲದ ಕಾಲಾವಧಿಯನ್ನು ಆರ್ ಬಿಐ ವಿಸ್ತರಗೊಳಿಸಿದೆ.
ಒಂದು ಕೋಟಿ ರೂಪಾಯಿಯವರೆಗಿನ ಕಾರು, ಗೃಹ, ಕೃಷಿ, ವೈಯಕ್ತಿಕ ಸಾಲದ ಮರುಪಾವತಿಗೆ ಅರವತ್ತು ದಿನಗಳ ಹೆಚ್ಚಿನ ಕಾಲಾವಧಿಯನ್ನು ನೀಡಲಾಗಿದ್ದು, ನವೆಂಬರ್ 1 ರಿಂದ ಡಿಸೆಂಬರ್ 31ರ ನಡುವೆ ಪಾವತಿಸಬೇಕಾಗಿದ್ದ ಸಾಲಕ್ಕೆ ಎರಡು ತಿಂಗಳ ಹೆಚ್ಚುವರಿ ಕಾಲಾವಧಿ ಲಭಿಸುವುದು ಎಂದು ನೂತನ ಅಧಿಸೂಚನೆ ಹೊರಡಿಸಿದೆ.