ಮೈಸೂರು

ಪಕೋಡ ಮಾಡಿ ಉದ್ಯೋಗ ಕಂಡುಕೊಳ್ಳಿ ಹೇಳಿಕೆಗೆ ಖಂಡನೆ : ಪ್ರತಿಭಟನೆ

ಮೈಸೂರು,ಫೆ.8:-  ನಂಜನಗೂಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರ ಜನ ಸಂಗ್ರಾಮ ಪರಿಷತ್ ಹಾಗೂ ಉದ್ಯೋಗಕ್ಕಾಗಿ ಯವ ಜನರು ಮತ್ತು ಇತರ ದಲಿತ ಪರ ಪ್ರಗತಿಪರ ಚಳುವಳಿಗಾರರು ಪ್ರಧಾನ ಮಂತ್ರಿಗಳು ಯುವಕರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಪಕೋಡ ಮಾಡಿ ಉದ್ಯೋಗ ಕಂಡು ಕೊಳ್ಳಿ ಎಂಬ ಹಗುರ ಹೇಳಿಕೆಯನ್ನು ಖಂಡಿಸಿ ವಿನೂತವಾಗಿ ಪ್ರತಿಭಟನೆ ನಡೆಸಿದರು.

ಡಾಕ್ಟರ್ ಪಕೋಡ, ಡಿಗ್ರಿ ಪಕೋಡ, ಇಂಜಿನಿಯರ್ ಪಕೋಡ, ಎಂ.ಎ. ಪಕೋಡ, ಎಂಬ ಭಿತ್ತಿ ಪತ್ರ ಹಿಡಿದು ಅಲ್ಲಿನ ವಿದ್ಯಾರ್ಥಿಗಳೇ ಪಕೋಡ ಮಾಡಿ ಮಾರಾಟ ಮಾಡುವ ಮುಖಾಂತರ ಪ್ರಧಾನ ಮಂತ್ರಿಗಳ ಹೇಳಿಕೆಯನ್ನು ಖಂಡಿಸಿದರು.  ಈ ಸಂದರ್ಭ ಉದ್ಯೋಗಕ್ಕಾಗಿ ಯುವ ಜನರು ಇದರ ರಾಜ್ಯ ಸಂಚಾಲಕ ಮಂಡ್ಯ ಸೋಮಶೇಖರ್ ಕುಮಾರ್, ಜನ ಸಂಗ್ರಾಮ ಪರಿಷತ್ ತಾಲೂಕು ಸಂಚಾಲಕ ಬದನವಾಳು ಸರ್ವೇಶ್,ಗ್ಯಾಸ್ ಸೋಮು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮಟ್ಟದ ಹಿರಿಯ ಹೋರಾಟಗಾರರಾದ ಚೋರನಹಳ್ಳಿ ಶಿವಣ್ಣ, ಮಲ್ಲೇಶ್ ಚುಂಚನಹಳ್ಳಿ, ಮಲ್ಲಹಳ್ಳಿ ನಾರಾಯಣ್, ಛಲವಾದಿ ಮಹಾ ಸಭಾ ತಾಲೂಕು ಅಧ್ಯಕ್ಷ ಆಭಿನಾಗಭೂಷಣ್, ಪೋಟೋ ಸಿದ್ದು, ಯುವ ಬರಹಗಾರ ಹಗಿವಾಳು ಚಿಕ್ಕಣ್ಣ, ರೈತ ಸಂಘದ ರಾಜ್ಯ ಸಮಿತಿ ಸದಸ್ಯ, ಪ್ರಗತಿಪರ ಹೋರಾಟಗಾರ ಕಂದೇಗಾಲ ಶ್ರೀನಿವಾಸ್, ಕಾರ್ಯ ಗ್ರಾಮ ಪಂಚಾಯತಿ ಪೂರ್ವ ನಿಯೋಜಿತ ಅಧ್ಯಕ್ಷ ಜೈ ಶಂಕರ್ ಪ್ರಗತಿಪರ ಚಿಂತಕ ಉಮಾಶಂಕರ್, ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು  ಪಾಲ್ಗೊಂಡಿದ್ದರು.    (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: