ಪ್ರಮುಖ ಸುದ್ದಿಮೈಸೂರು

ವಿವಿ ಸಾಮಾನ್ಯ ಸಭೆ : ಅಂಗವಿಕಲ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ನೀಡಬೇಕು

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಮಂಗಳವಾರ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆ ಜರುಗಿತು.

ಸಭೆಯಲ್ಲಿ ಪಿ.ಹೆಚ್.ಡಿ ಸಂಶೋಧನೆಗೆ ವಿಕಲಚೇತನ ಅಭ್ಯರ್ಥಿಗಳಿಗೆ ಸಿಂಡಿಕೇಟ್ ನಿರ್ಣಯದಂತೆ ಈಗಾಗಲೇ ಶೇ.3ಕ್ಕಿಂತ ಕಡಿಮೆ ಇಲ್ಲದಂತೆ ಸ್ಥಾನಗಳನ್ನು ಮೀಸಲಿರಿಸಿದೆ. ಆದರೆ ವಾರ್ಷಿಕ ಶುಲ್ಕದಲ್ಲಿ ರಿಯಾಯಿತಿಯನ್ನು ನೀಡುವ ಬಗ್ಗೆ ಪಿ.ಹೆಚ್.ಡಿ ನಿಯಮಾವಳಿಗಳಲ್ಲಿ ಆಗಲೀ ಅಥವಾ ವಿಶ್ವವಿದ್ಯಾನಿಲಯದ ಫ್ರೀ ಸ್ಟ್ರಕ್ಚರ್ ನಲ್ಲಿ ಆಗಲಿ ಅವಕಾಶವಿರುವುದಿಲ್ಲ. ಸಾಮಾನ್ಯ ವಿದ್ಯಾರ್ಥಿಗಳಿಗೆ ವಿಧಿಸುವಂತೆ ಅಂಗವಿಕಲ ವಿದ್ಯಾರ್ಥಿಗಳಿಗೂ ಸಹ ಶುಲ್ಕ ವಿಧಿಸಲಾಗುತ್ತದೆ. ಶುಲ್ಕ ವಿನಾಯಿತಿ ಸಂಬಂಧ ನಿರ್ಣಯ ಕೈಗೊಳ್ಳುವ ಕುರಿತ ಮಾತುಗಳು ಕೇಳಿ ಬಂತು.

ವಿಶ್ವವಿದ್ಯಾನಿಲಯದ ಸ್ವಾಯತ್ತತಾ ಕಾಲೇಜುಗಳ ಪ್ರವಾಶಾತಿ ಅನುಮೋದನೆ ಸಂಬಂಧ ವಿವಿಗೆ ಪಾವತಿಸುವ ಶುಲ್ಕಗಳ ಕುರಿತು, ದಿವಂಗತ ಎನ್.ಶ್ರೀಕಂಠ ಇಂಗ್ಲೀಷ್ ಸಹ ಪ್ರಾಧ್ಯಾಪಕ ಸ್ಮಾರಕ ನಗದು ಬಹುಮಾನ ದತ್ತಿ ಸ್ಥಾಪನೆಯ ಬಗ್ಗೆ, 2017-18ನೇ ಶೈಕ್ಷಣಿಕ ಸಾಲಿನಿಂದ ಶ್ರೀಶಂಭುಲಿಂಗೇಶ್ವರ ಬಿ.ಪಿ.ಎಡ್ ಕಾಲೇಜು, ಪಾಂಡವಪುರ ಈ ಕಾಲೇಜಿನಲ್ಲಿ ಎಂ.ಪಿ.ಎಡ್, ಸ್ನಾತಕೋತ್ತರ ಕೋರ್ಸನ್ನು ಹೊಸದಾಗಿ ಪ್ರಾರಂಭಿಸಲು ಸಂಯೋಜನೆ ನೀಡುವುದರ ಬಗ್ಗೆ, ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ನ ರೆಗ್ಯುಲೇಷನ್ ಗೆ ತಿದ್ದುಪಡಿ ಮಾಡುವ ಕುರಿತಂತೆ ಹಾಗೂ ವಿವಿಧ ಸ್ನಾತಕ ಪದವಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಡಬಲ್ ದಿ ಡ್ಯುರೇಶನ್ ನಂತರವೂ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ವಿಷಯ ಮಂಡಿಸಲಾಯಿತು.

ಸಭೆಯಲ್ಲಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ. ಕುಲಸಚಿವ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: