ಸುದ್ದಿ ಸಂಕ್ಷಿಪ್ತ

ಮೈಸೂರು ಲೋಗೋ ಸ್ಪರ್ಧೆ ದಿನಾಂಕ ವಿಸ್ತರಣೆ

ಮೈಸೂರು ಫೆ.9:-  ಮೈಸೂರು ನಗರವನ್ನು ವಿಶ್ವ ಮಟ್ಟದಲ್ಲಿ ವಿಶಿಷ್ಟ ಸ್ಥಾನವನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಲೋಗೋವನ್ನು ಹೊಂದಲು ತಿರ್ಮಾನಿಸಲಾಗಿದೆ. ಮುಕ್ತ ಸ್ಪರ್ಧೆಯ ಮೂಲಕ ಲೋಗೋವನ್ನು ಸಲ್ಲಿಸಲು ಹೆಚ್ಚಿನ ಸ್ಪರ್ಧಾಸಕ್ತರು ಹಾಗೂ ವಿನ್ಯಾಸಕರು ಇ-ಮೇಲ್ ಮೂಲಕ ವಿವಿಧ ವಿನ್ಯಾಸಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶವನ್ನು ಕೋರಿರುವುದರಿಂದ ಫೆಬ್ರವರಿ 15 ರ ಸಂಜೆ 5 ಗಂಟೆಯವರಗೆ ವಿಸ್ತರಿಸಲಾಗಿದೆ.

ನಿಗಧಿತ ನಮೂದುಗಳನ್ನು [email protected] ಗೆ ಇ-ಮೇಲ್ ಮೂಲಕ ಸಲ್ಲಿಸುವುದು. ಉಳಿದ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ, ಹೆಚ್ಚಿನ ಮಾಹಿತಿಗಾಗಿ www.mysore.nic.in ಸಂಪರ್ಕಿಸಬಹುದು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಉಪನಿರ್ದೇಶಕ ಹಾಗೂ ಸದಸ್ಯ ಕಾರ್ಯದರ್ಶಿಗಳು  ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: