ಕ್ರೀಡೆಮನರಂಜನೆ

ಕೊಹ್ಲಿಗೆ ಮಾವನಿಂದ ಸ್ಪೆಷಲ್ ಗಿಫ್ಟ್ ಏನು ಗೊತ್ತಾ..?

ಮುಂಬೈ,ಫೆ.09: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯ ಬಳಿಕ ಅಳಿಯ ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆಯೊಂದನ್ನ ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಅನುಷ್ಕಾ ತಂದೆ ನಿವೃತ್ತ ಕೊಲೋನಲ್ ಅಜಯ್ ಕುಮಾರ್ ಶರ್ಮಾ ತಮ್ಮ ಮುದ್ದಿನ ಅಳಿಯನಿಗೆ ಒಂದು ಪ್ರೇಮ ಕವನಗಳ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ತೇಜಸ್ವಿನಿ ದಿವ್ಯಾ ನಾಯ್ಕ್ ಬರದಿರುವ 42 ಪದ್ಯಗಳಿರುವ ‘ಸ್ಮೋಕ್ಸ್ ಅಂಡ್ ವಿಸ್ಕಿ’ ಎಂಬ ಪುಸ್ತವನ್ನ ಗಿಫ್ಟ್ ಆಗಿ ನೀಡಿದ್ದಾರೆ.

ಈ ಪುಸ್ತಕದಲ್ಲಿ ಪ್ರೀತಿ ಹಾಗೂ ಸಂಬಂಧಗಳು, ಅದರ ಏರಿಳಿತಗಳ ಬಗೆಗಿನ ಪದ್ಯಗಳಿದ್ದು, ಫೆಬ್ರವರಿ 3ರಂದು ಮುಂಬೈನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅನುಷ್ಕಾ ಪೋಷಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನುಷ್ಕಾ ತಂದೆಗೆ ನಾಯ್ಕ್ ಅವರ ಕೃತಿ ಇಷ್ಟವಾಗಿ ಕೊಹ್ಲಿಗಾಗಿ ಪುಸ್ತಕದ ಪ್ರತಿಯೊಂದನ್ನ ತಂದಿ ಪ್ರೀತಿಯ ಅಳಿಯ  ಕೋಹ್ಲಿಗೆ ಉಡುಗೊರೆ ನೀಡಿದ್ದಾರೆ .  ( ವರದಿ; ಪಿ.ಎಸ್ )

Leave a Reply

comments

Related Articles

error: