ಸುದ್ದಿ ಸಂಕ್ಷಿಪ್ತ

ಮಾನಸಧಾರ ಫೆಸ್ಟ್ ನ.24 ರಿಂದ

ಜೆಎಸ್ಎಸ್ ಪಬ್ಲಿಕ್ ಶಾಲೆಯು ನ.24,25 ಮತ್ತು 26 ರಂದು 3 ದಿನಗಳ ‘ಮಾನಸಧಾರ’-ಫೆಸ್ಟ್-2016-17 ನ್ನು ಹಮ್ಮಿಕೊಂಡಿದೆ.

ನ.24 ರಂದು ‘ಸಮೂಹ ಮಾಧ್ಯಮ ಯುವಕರನ್ನು ಹಾದಿತಪ್ಪಿಸುತ್ತಿವೆಯೇ?’ ಎಂಬ ವಿಷಯದ ಕುರಿತು ಚರ್ಚಾ ಸ್ಪರ್ಧೆ ನಡೆಯಲಿದೆ. ಆಂದೋಲನ ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.  ನ.25 ರಂದು ಶಾಸ್ತ್ರೀಯ ಯುಗಳ ನೃತ್ಯ ಸ್ಪರ್ಧೆ ಮತ್ತು ಪೋಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು, ನ.26 ರಂದು 22 ನೇ ವಾರ್ಷಿಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸಿ.ಜಿ.ಬೆಟ್ ಸೂರ್ ಮಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: