ಸುದ್ದಿ ಸಂಕ್ಷಿಪ್ತ
ಜ.24 ರಿಂದ ಸುತ್ತೂರು ಜಾತ್ರೆ ಮತ್ತು ವಸ್ತು ಪ್ರದರ್ಶನ
ಜ.24 ರಿಂದ 29 ರವರೆಗೆ ಸುತ್ತೂರು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಜೊತೆಗೆ ಜನಜಾಗೃತಿ ಮತ್ತು ಜನಮಾಹಿತಿಗಾಗಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ವಸ್ತು ಪ್ರದರ್ಶನದಲ್ಲಿ 300 ಕ್ಕೂ ಹೆಚ್ಚು ಮಳಿಗೆಗಳಿರುತ್ತವೆ. ಕುಶಲಕರ್ಮಿಗಳು, ಪ್ರಕಾಶಕರು ಮತ್ತು ಮಾರಾಟಗಾರರು ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ತಮ್ಮ ಮಳಿಗೆಗಳನ್ನು ತೆರೆಯಬಹುದಾಗಿದೆ.
ಮಳಿಗೆಗಳನ್ನು ಪಡೆಯಲಿಚ್ಛಿಸುವವರು ಸಂಚಾಲಕ ಎಂ.ಮಲ್ಲಿಕಾರ್ಜುನ 9448773134 ಗೆ ಸಂಪರ್ಕಿಸಬಹುದಾಗಿದೆ.