ಮೈಸೂರು

ಚಲನ ಚಿತ್ರಗಳ ನಕಲಿ ಡಿ.ವಿ.ಡಿ.ಗಳನ್ನು ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ : ಓರ್ವನ ಬಂಧನ

ಮೈಸೂರು,ಫೆ.9:-  ಮೈಸೂರು ನಗರದ ಸಿ.ಸಿ.ಬಿ. ಮತ್ತು ದೇವರಾಜ ಪೊಲೀಸರು ಖಚಿತ  ಮಾಹಿತಿ ಮೇರೆಗೆ  ಫೆ. 8 ರಂದು ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಾಜ ಮೊಹಲ್ಲಾದ, ಗಂಗಮ್ಮ ದೇವಸ್ಥಾನದ ರಸ್ತೆ,   ನಂ:576/1ರ ಮನೆಯ ಮೇಲೆ ದಾಳಿ ಮಾಡಿ ಕಾನೂನು ಬಾಹಿರವಾಗಿ ವಿವಿಧ ಭಾಷೆಗಳ ಚಲನ ಚಿತ್ರಗಳ ನಕಲಿ ಡಿ.ವಿ.ಡಿ.ಗಳನ್ನು ತಯಾರು ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ದೇವರಾಜ ಮೊಹಲ್ಲಾ ಗಂಗಮ್ಮ ದೇವಸ್ಥಾನದ ರಸ್ತೆಯ ಹೇಮಂತ್ ಕುಮಾರ್(45) ಎಂದು ಗುರುತಿಸಲಾಗಿದೆ.  ಈತನಿಂದ  1,00,000 ರೂ. ಮೌಲ್ಯದ  ಕನ್ನಡ, ತೆಲುಗು, ಇಂಗ್ಲೀಷ್, ತಮಿಳು ಚಲನ ಚಿತ್ರಗಳ ನಕಲಿ 2340 ಡಿ.ವಿ.ಡಿಗಳು , 200 ಖಾಲಿ ಡಿವಿಡಿಗಳು, ನಕಲಿ ಡಿ.ವಿ.ಡಿ.ಗಳನ್ನು ತಯಾರು ಮಾಡಲು ಬಳಸುತ್ತಿದ್ದ 03 ಯಂತ್ರಗಳು, 01 ಬ್ಯಾಟರಿ, 01 ಕಲರ್ ಪ್ರಿಂಟರ್, 1000 ಕಲರ್ ಪೇಪರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ದಾಳಿ ಕಾರ್ಯವನ್ನು  ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ವಿ ಅಮಟೆ ಮಾರ್ಗದರ್ಶನದಲ್ಲಿ, ಎ.ಸಿ.ಪಿ. ಸಿ.ಸಿ.ಬಿ. ಬಿ.ಆರ್. ಲಿಂಗಪ್ಪ ನೇತೃತ್ವದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್    ಆರ್. ಜಗದೀಶ್, ಎಎಸ್‍ಐ ಚಂದ್ರೇಗೌಡ ಸಿಬ್ಬಂದಿಗಳಾದ ಯಾಕುಬ್ ಷರೀಫ್,  ರಾಮಸ್ವಾಮಿ, ನಿರಂಜನ , ಆನಂದ  ಹಾಗೂ ದೇವರಾಜ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: