ಸುದ್ದಿ ಸಂಕ್ಷಿಪ್ತ

ಫೆ. 12 : ಜನಸಂಪರ್ಕ ಸಭೆ

ಮೈಸೂರು ಫೆ. 10:- ಎನ್.ಆರ್.ಮೊಹಲ್ಲಾ ಮತ್ತು ಜ್ಯೋತಿನಗರ ಉಪ ವಿಭಾಗದ ವ್ಯಾಪ್ತಿಯ ಗ್ರಾಹಕರಿಗಾಗಿ ಫೆ. 12 ರಂದು ಬೆಳಿಗ್ಗೆ 11  ಗಂಟೆಗೆ ಎನ್.ಆರ್.ಮೊಹಲ್ಲಾ ಉಪ-ವಿಭಾಗ ಕಛೇರಿಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಜ್ಯೋತಿನಗರ ಉಪ-ವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.

ಗ್ರಾಹಕರು ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಇದ್ದಲ್ಲಿ ಸಭೆಗೆ ಆಗಮಿಸಿ ಲಿಖಿತ ಅರ್ಜಿಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಕಾರ್ಯ ಮತ್ತು ಪಾಲನೆ, ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.        (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: