Uncategorizedಮೈಸೂರು

ಜೆಎಸ್‍ಎಸ್ ಶಾಲಾ ಭೂದಳದ ಪ್ರಥಮಾಧಿಕಾರಿ ಅವರಿಗೆ ಬೆಸ್ಟ್ ಇನ್ಸಟಿಟ್ಯೂಷನ್ ಅವಾರ್ಡ್

ಮೈಸೂರು,ಫೆ.10:- ಸುತ್ತೂರಿನ  ಜೆಎಸ್‍ಎಸ್ ಪ್ರೌಢಶಲಾ ಭೂದಳದ 2004 ರಲ್ಲಿ ಪ್ರಾರಂಭವಾಗಿ ಪ್ರತಿ ವರ್ಷ 100 ಕೆಡಟ್ ಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಎನ್‍ಸಿಸಿ ವತಿಯಿಂದ ಏರ್ಪಡಿಸಿರುವ ಅನೇಕ ಶಿಬಿರಗಳಲ್ಲಿ ಭಾಗವಹಿಸಿ ಕವಾಯತ್, ಗಾಯನ, ನೃತ್ಯ ಆಟೋಟ, ಫೈರಿಂಗ್ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಗ್ರ ಬಹುಮಾನಗಳನ್ನು ಪಡೆದಿದ್ದಾರೆ.

ಹಲವಾರು ಕೆಡೆಟ್ ಗಳು ತಾಲ್ ಸೈನಿಕ,  ಗಣರಾಜ್ಯೋತ್ಸವ, ಟ್ರಕ್ಕಿಂಗ್, ಬೇಸಿಕ್ ಲೀಡರ್ ಶಿಪ್ ಶಿಬಿರಗಳಲ್ಲಿ ಭಾಗವಹಿಸಿ ಶಿಸ್ತಿನ ಸಿಪಾಯಿಗಳೆನಿಸಿಕೊಂಡು ಅನೇಕ ಬಹುಮಾನಗಳನ್ನು ಪಡೆದು ಶಾಲಾ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಈ ಎಲ್ಲ ಸಾಧನೆಗಾಗಿ ಪ್ರತಿವರ್ಷ ಎನ್‍ಸಿಸಿ ಕರ್ನಾಟಕ, ಗೋವಾ ವತಿಯಿಂದ ನೀಡುವ ಅತ್ಯುತ್ತಮ ಸಂಸ್ಥೆ ಪ್ರಶಸ್ತಿಯನ್ನು ಈ ವರ್ಷ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಫೆ.4 ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಲಾ ಭೂದಳದ ಪ್ರಥಮಾಧಿಕಾರಿಯಾದ ಸಿ.ಪಿ. ನಿರ್ಮಲ ಅವರು ಎರಡನೇ ಬೆಸ್ಟ್ ಇನ್ಸಿಟಿಟ್ಯೂಷನ್ ಅವಾರ್ಡ್‍ನ್ನು ಶಾಲಾ ಭೂದಳದ ಪರವಾಗಿ ಡೆಪ್ಯೂಟಿ ಡೈರಕ್ಟರ್ ಆಫ್ ಜನರಲ್ ಡೆಪ್ಯೂಟಿ ಡೈರೆಕ್ಟರ್ ಆಫ್ ಜನರಲ್ ಬ್ರಿಗೇಡಿಯರ್ ಡಿ.ಎಂ.ಪೂರ್ವಿಕ್ ಅವರಿಂದ 3ನೇ ಬಾರಿ ಬೆಸ್ಟ್ ಇನ್ಸ್ಟಿಟ್ಯೂಷನ್ ಪ್ರಶಸ್ತಿಯನ್ನು ಪಡೆದರು. ಇವರ ಸಾಧನೆಯನ್ನು ಸಂಸ್ಥೆಯ ಆಡಳಿತಾಧಿಕಾರಿಗಳು, ಸಂಯೋಜನಾಧಿಕಾರಿಗಳು, ಮುಖ್ಯಸ್ಥರು ಅಭಿನಂದಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: