ದೇಶಪ್ರಮುಖ ಸುದ್ದಿ

ಚಾಲನಾ ಪರವಾನಗಿಗೆ ಆಧಾರ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ನವದೆಹಲಿ(ಫೆ.10): ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಂಯೋಜಿಸಬೇಕು ಎಂಬ ಸುದ್ದಿಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಆದರೆ ವಿಳಾಸ ಮತ್ತು ವಯಸ್ಸಿನ ಖಾತರಿಗಾಗಿ ಆಧಾರ್ ಕಾರ್ಡ ಅನ್ನು ಒಂದು ಆಯ್ಕೆಯಾಗಿ ಕೊಡಬಹುದು ಎಂದು ತಿಳಿಸಿದೆ.

ಚಾಲನಾ ಪರವಾನಗಿ ಪಡೆಯಲು ಸಲ್ಲಿಸುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ವಿಳಾಸ ಮತ್ತು ವಯಸ್ಸಿನ ಖಾತರಿಗೆ ಬಳಸುವ ದಾಖಲೆಗಳಲ್ಲಿ ಆಧಾರ್ ಕಾರ್ಡನ್ನು ಅನ್ನು ಕೂಡ ಸೇರಿಸಲಾಗಿದೆ ಎಂದು ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಆಧಾರ್ ಕಾರ್ಡ್ ಮಾಡಿಸದೇ ಇದ್ದವರು ಪಾಸ್‍ಪೋರ್ಟ್, ಜನನ ಪ್ರಮಾಣಪತ್ರ, ಜೀವ ವಿಮಾ ಪಾಲಿಸಿಯನ್ನು ಧೃಢೀಕರಣ ದಾಖಲೆಯಾಗಿ ಸಲ್ಲಿಸಬಹುದಾಗಿದೆ ಎಂದು ಸಚಿವ ಪ್ರಸಾದ್ ತಿಳಿಸಿದ್ದಾರೆ.

(ಎನ್‍ಬಿ)

Leave a Reply

comments

Related Articles

error: